Select Your Language

Notifications

webdunia
webdunia
webdunia
webdunia

ಜನಾರ್ದನ ರೆಡ್ಡಿ ಅಗ್ನಿ ಪರೀಕ್ಷೆ ಗೆದ್ದು ಮತ್ತೇ ತವರು ಮನೆಗೆ ವಾಪಾಸ್ಸಾಗಿದ್ದಾರೆ: ಬಿ.ಶ್ರೀರಾಮುಲು

LokhSabha Election 2024

Sampriya

ಬೆಂಗಳೂರು , ಸೋಮವಾರ, 25 ಮಾರ್ಚ್ 2024 (15:24 IST)
Photo Courtesy X
ಬೆಂಗಳೂರು: 12 ವರ್ಷಗಳ ನಂತರ ಬಿಜೆಪಿಗೆ ಸೇರ್ಪಡೆಗೊಂಡ ಶಾಸಕ ಜನಾರ್ದನ ರೆಡ್ಡಿ ವಾಪಾಸ್ಸಾದ ಬಗ್ಗೆ ಆಪ್ತ ಗೆಳೆಯ ಬಿ.ಶ್ರೀರಾಮುಲು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಗೆ ಬಿಜೆಪಿ ತವರು ಮನೆ ಇದ್ದ ಹಾಗೇ. ಮನೆ ಬಿಟ್ಟು ಹೋದ ಮಗ ಇಂದು ವಾಪಾಸ್ಸಾಗಿದ್ದಾರೆ. ಶ್ರೀರಾಮ ಚಂದ್ರ ಅಗ್ನಿಪರೀಕ್ಷೆ ನಂತರ ಹೇಗೆ ಮನೆಗೆ ವಾಪಾಸ್ಸಾಗಿದ್ದರು, ಹಾಗೆಯೇ ಜನಾರ್ದನ ರೆಡ್ಡಿ ಅವರು ಅಗ್ನಿ ಪರೀಕ್ಷೆಯನ್ನು ಗೆದ್ದು ಮತ್ತೇ ಮನೆಗೆ ವಾಪಾಸ್ಸಾಗಿದ್ದಾರೆ ಎಂದರು.

ಜನಾರ್ದನ ರೆಡ್ಡಿ ಮಾತನಾಡಿ, ಬಿಜೆಪಿ ಅನ್ನೋದು ನನ್ನ ರಕ್ತದ ಕಣ ಕಣದಲ್ಲಿದೆ. ಅನಿವಾರ್ಯ ಕಾರಣಗಳಿಂದ ನಾನು ಪಕ್ಷದ ಹೊರಗಡೆ ಹೋಗಬೇಕಾಯಿತು. ಇಂದು ನನ್ನ ಮನೆಗೆ ವಾಪಾಸ್ಸಾಗಿದ್ದೇನೆ ಎಂದರು.

ಇಂದು ಶಾಸಕ ಜನಾರ್ದನ ರೆಡ್ಡಿ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ವಿಜಯೇಂದ್ರ ಅವರು ಬಿಜೆಪಿ ಪಕ್ಷದ ಬಾವುಟ ನೀಡಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿಯನ್ನು ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಬಿಜೆಪಿ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಮುಖಂಡರು ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ 14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರಕ್ಕೆ ನಟಿ ಸೋನು ಗೌಡ ಶಿಫ್ಟ್‌