ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025 ಮಂಡನೆ ಆರಂಭಿಸಿದ್ದು, ಈ ಬಾರಿ ಬಜೆಟ್ ನಲ್ಲಿ ಬಡತನ ನಿರ್ಮೂಲನೆಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ನಿರ್ಮಲಾ ಯಾವೆಲ್ಲಾ ಘೋಷಣೆ ಮಾಡುತ್ತಿದ್ದಾರೆ ಇಲ್ಲಿದೆ ಲೈವ್ ಲಿಂಕ್. 2047 ರ ವೇಳೆಗೆ ಭಾರತವನ್ನು ಬಡತನ ಮುಕ್ತ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ. ರೈತರಿಗಾಗಿ ಕಿಸಾನ್ ಕಾರ್ಡ್ ಮಿತಿ ಸಾಲ ಮಿತಿ 5 ಲಕ್ಷಕ್ಕೆ ಏರಿಕೆ, ವಿಶೇಷ ಆಟಿಕೆ ತಯಾರಿಕೆಗಳ ಉತ್ಪಾದನೆಗೆ ಬೆಂಬಲ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದಾರೆ.