Daily Horoscope

Select Your Language

Notifications

webdunia
webdunia
webdunia
webdunia

ಬಾ ನಲ್ಲ ಮದುಚಂದ್ರಕ್ಕೆ ಪ್ರಕರಣ: ರಾಜಾ ರಘುವಂಶಿ ಮರ್ಡರ್ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ

ರಾಜಾ ರಘುವಂಶಿ ಕೊಲೆ ಪ್ರಕರಣ
ಜೈಪುರ್‌: ಮೇಘಾಲಯ ಪೊಲೀಸ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ತನ್ನ ಆರೋಪಪಟ್ಟಿ ಸಲ್ಲಿಸಿದ್ದು, ಹತ್ಯೆಯಾದ ರಘುವಂಶಿ ಪತ್ನಿ ಸೋನಂ ರಘುವಂಶಿ, ಆಕೆಯ ಪ್ರಿಯಕರ ರಾಜ್ ಕುಶ್ವಾಹಾ ಮತ್ತು ಇತರ ಮೂವರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ.

ಈ ವರ್ಷದ ಆರಂಭದಲ್ಲಿ ದೇಶಾದ್ಯಂತ ಬೆಚ್ಚಿಬೀಳಿಸಿದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿಯನ್ನು ಸಿನಿಮೀಯ ರೀತಿಯಲ್ಲಿ ಬರ್ಬರಾವಾಗಿ ಹತ್ಯೆ ಮಾಡಲಾಗಿತ್ತು. ತನಿಖೆಯನ್ನು ಆರಂಭಿಸಿದಾಗ ಪತ್ನಿಯೇ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದಿರುವುದು ಬೆಳಕಿಗೆ ಬಂದಿದೆ. 

ಹತ್ಯೆಗೆ ಸಂಬಂಧಿಸಿದಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ಸೊಹ್ರಾ ಉಪವಿಭಾಗದ ನ್ಯಾಯಾಲಯಕ್ಕೆ 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಮೇಘಾಲಯ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇ 23 ರಂದು ಹನಿಮೂನ್ ಸಮಯದಲ್ಲಿ ಮಹಿಳೆ ತನ್ನ ಪತಿಯನ್ನು ಕೊಲೆ ಮಾಡಲು ಸಹಾಯ ಮಾಡಿದ ಆರೋಪದಲ್ಲಿ ಸೋನಮ್ ಮತ್ತು ರಾಜ್ ಜೊತೆಗೆ, ಆಕಾಶ್ ರಜಪೂತ್, ಆನಂದ್ ಕುರ್ಮಿ ​​ಮತ್ತು ವಿಶಾಲ್ ಸಿಂಗ್ ಚೌಹಾಣ್ ವಿರುದ್ಧ ಆರೋಪ ಹೊರಿಸಲಾಗಿದೆ.

ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ 103 (I) ಕೊಲೆ, 238 (ಎ) ಅಪರಾಧದ ಸಾಕ್ಷ್ಯಾಧಾರಗಳ ನಾಪತ್ತೆ ಮತ್ತು 61 (2) ಕ್ರಿಮಿನಲ್ ಪಿತೂರಿಯ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಹೆಚ್ಚುವರಿ ಫೋರೆನ್ಸಿಕ್ ವರದಿಗಳು ಹೊರಬಂದ ನಂತರ ಇನ್ನೂ ಮೂವರ ಸಹ ಆರೋಪಿಗಳ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯಮ್ ಹೇಳಿದ್ದಾರೆ. ಅವರು ಆಸ್ತಿ ಡೀಲರ್ ಸಿಲೋಮ್ ಜೇಮ್ಸ್, ಲೋಕೇಂದ್ರ ತೋಮರ್, ಅಪರಾಧ ಮಾಡಿದ ನಂತರ ಸೋನಮ್ ಅಡಗಿಕೊಂಡಿದ್ದ ಕಟ್ಟಡದ ಮಾಲೀಕ ಮತ್ತು ಪ್ರದೇಶದ ಭದ್ರತಾ ಸಿಬ್ಬಂದಿ ಬಲ್ಬೀರ್ ಅಹಿರ್ಬರ್ ಅವರನ್ನು ಉಲ್ಲೇಖಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ದನ ರೆಡ್ಡಿ ವಿರುದ್ಧ ಮಾನಮಷ್ಟ ಮೊಕದ್ದಮೆ ದಾಖಲಿಸಿದ ಸಸಿಕಾಂತ್ ಸೆಂಥಿಲ್