Publish Date: Thu, 22 Sep 2022 (08:30 IST)
Updated Date: Thu, 22 Sep 2022 (08:50 IST)
ಭುವನೇಶ್ವರ್: ತಮ್ಮ ಚೆನ್ನಾಗಿ ಓದುತ್ತಿಲ್ಲವೆಂದು ಅಣ್ಣನೇ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
25 ವರ್ಷದ ಆರೋಪಿ ಅಣ್ಣ ಎಂಬಿಎ ಪದವೀಧರನಾಗಿದ್ದ. ಈತ 21 ವರ್ಷದ ಬಿಎಡ್ ವಿದ್ಯಾರ್ಥಿಯಾಗಿದ್ದ ಸಹೋದರನನ್ನು ಕೊಲೆ ಮಾಡಿದ್ದಾನೆ. ಓದಿನ ಕಡೆ ಗಮನ ಕೊಡದೇ ಸ್ನೇಹಿತರ ಜೊತೆ ಸುತ್ತಾಡಿ ಟೈಂಪಾಸ್ ಮಾಡುತ್ತಿದ್ದರಿಂದ ತಮ್ಮನ ಮೇಲೆ ಅಣ್ಣ ಕೋಪಗೊಂಡಿದ್ದ.
ಇದೇ ಸಿಟ್ಟಿನಲ್ಲಿ ಹೊಡೆದಿದ್ದಾನೆ. ಹೊಡೆತದ ಪರಿಣಾಮ ತಮ್ಮ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.