Select Your Language

Notifications

webdunia
webdunia
webdunia
webdunia

ಗಣೇಶ ವಿಸರ್ಜನೆ ಪಿ. ಎಸ್. ಐ. ಮೇಲೆ ಹಲ್ಲೆ

ಗಣೇಶ ವಿಸರ್ಜನೆ ಪಿ. ಎಸ್. ಐ. ಮೇಲೆ ಹಲ್ಲೆ
ಬೆಂಗಳೂರು , ಸೋಮವಾರ, 19 ಸೆಪ್ಟಂಬರ್ 2022 (15:34 IST)

ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಭಾನುವಾರ ನಡೆದಿತ್ತು. ರಾತ್ರಿ ೧೦ ಗಂಟೆಯಾದರೂ ಮೆರವಣಿಗೆ ಮುಂದುವರಿದಿತ್ತು. ಯುವಕರ ಗುಂಪು ದೊಡ್ಡ ಸೌಂಡ್‌ ಇಟ್ಟು ಮೈಕ್‌ ಹಾಕಿ ಡ್ಯಾನ್ಸ್‌ ಮಾಡುತ್ತಿತ್ತು. ಈ ವೇಳೆ ಎಸ್‌ಐ ಅವರು ರಾತ್ರಿ ಹತ್ತು ಗಂಟೆ ದಾಟಿರುವುದರಿಂದ ಮೈಕ್‌ ಬಂದ್‌ ಮಾಡಿ ಎಂದು ಕೇಳಿಕೊಂಡರು. ಆದರೆ, ಯುವಕರು ಇದಕ್ಕೆ ಒಪ್ಪಲಿಲ್ಲ.
ಮೈಕ್‌ ಸೌಂಡ್‌ ಬಂದ್‌ ಮಾಡಲೂ ಇಲ್ಲ, ಸೌಂಡ್‌ ಕಡಿಮೆ ಮಾಡಲೂ ಇಲ್ಲ. ಬದಲಾಗಿ ಸೌಂಡ್‌ ಇನ್ನಷ್ಟು ಹೆಚ್ಚಿಸಿದರು. ಈ ನಡುವೆ, ಗುಂಪಿನಲ್ಲಿದ್ದ ಮಹೇಂದ್ರ ಎಂಬಾತ ಪಿಎಸ್‌ಐ ಅವರ ಮೇಲೆ ಕಲ್ಲು ಎಸೆದಿದ್ದಾನೆ. ಗಾಯಗೊಂಡ ಪಿಎಸ್‌ಐ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಲು ತೂರಾಟ ಮಾಡಿದ ಮಹೇಂದ್ರ ಮತ್ತು ಅವನಿಗೆ ಕುಮ್ಮಕ್ಕು ನೀಡಿದವರು ಸೇರಿದಂತೆ 25 ಕ್ಕು ಹೆಚ್ಚು ಯುವಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 10 ಮಂದಿ ಯುವಕರನ್ನು ಈಗಾಗಲೇ ಬಂಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೌನ್‌ ಬನೇಗ ಕರೋಡ್‌ಪತಿ ಕಾರ್ಯಕ್ರಮ ಕೋಟಿ ಗೆದ್ದ ಮಹಿಳೆ ..!!