Select Your Language

Notifications

webdunia
webdunia
webdunia
Saturday, 12 April 2025
webdunia

ಪ್ರಿಯತಮೆಯ ಅಶ್ಲೀಲ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್: ಆರೋಪಿ ಬಂಧನ

lover
delhi , ಶನಿವಾರ, 4 ನವೆಂಬರ್ 2023 (11:15 IST)
ಯವತಿ ಸ್ಟಾರ್ ಹೊಟೆಲ್ ಒಂದರಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಅಲ್ಲಿಯೇ ಆಕೆ 2009ರಲ್ಲಿ ಸಲಾವುದ್ದೀನ್ ಎಂಬಾತನನ್ನು ಭೇಟಿಯಾಗಿದ್ದಳು. ಸಿಕಂದರಾಬಾದ್ ನಿವಾಸಿಯಾದ ಆತ ವ್ಯವಹಾರದ ಸಂಬಂಧ ಮುಂಬೈಗೆ ಬಂದಾಗ ಆಕೆ ಕೆಲಸ ಮಾಡುತ್ತಿದ್ದ 7 ಸ್ಟಾರ್ ಹೊಟೆಲ್‌ನಲ್ಲಿಯೇ ತಂಗುತ್ತಿದ್ದ. ಹೀಗಾಗಿ ಅವರಿಬ್ಬರ ನಡುವೆ ಹುಟ್ಟಿದ ಸ್ನೇಹ ನಂತರ ಪ್ರೀತಿಯಾಗಿ ಪರಿವರ್ತನೆಗೊಂಡಿತ್ತು. ಪೀಡಿತೆ ನೀಡಿರುವ ದೂರಿನ ಆಧಾರದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  
 
ತನ್ನ ಪ್ರಿಯತಮೆಯ ಅಶ್ಲೀಲ ವಿಡಿಯೋ ತಯಾರಿಸಿಟ್ಟುಕೊಂಡಿದ್ದ 30 ವರ್ಷದ ಉದ್ಯಮಿಯೊಬ್ಬ ಆಕೆಯ ಸಹೋದರಿಯರ ಮೇಲೆ ಅತ್ಯಾಚಾರ ಎಸಗುವ ಮತ್ತು ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಒಡ್ಡಿ 60 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾನಲ್ಲದೇ ಮತ್ತೆ 3 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ ಎಂದು ವರದಿಯಾಗಿದೆ. 
 
ಪೀಡಿತೆ ವಿವಾಹಿತಳಾಗಿದ್ದು ಆಕೆಗೆ 8 ವರ್ಷದ ಮಗನಿದ್ದಾನೆ. ಆದರೆ ಪತಿಯ ಜತೆಗೆ ಆಕೆಯ ಸಂಬಂಧ ಹಳಸಿತ್ತು. ಇದರ ಲಾಭ ಪಡೆದುಕೊಂಡ ಖಾನ್ ಆಕೆಯನ್ನು ದುರ್ಬಳಕೆ ಮಾಡಿಕೊಂಡ. ಆಕೆಯ ಅಶ್ಲೀಲ್ ವಿಡಿಯೋ ತಯಾರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಒಡ್ಡಿ ಹಣ ಕೀಳ ತೊಡಗಿದ. ಆಕೆಗಾತ ದೈಹಿಕ ಹಿಂಸೆಯನ್ನು ಕೂಡ ನೀಡಿದ. ಆತನ ಹಿಂಸೆಯಿಂದ ಬೇಸತ್ತಿದ್ದ ಪೀಡಿತೆ ಗಮ್ದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾಳೆ ಎಂದು ವರದಿಯಾಗಿದೆ. 
 
ಆದರೆ ಆರೋಪಿಯ ಪರ ವಕೀಲ ಅಜಯ್ ದುಬೆ  ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಅವರಿಬ್ಬರು ವಿವಾಹ ಮಾಡಿಕೊಂಡಿದ್ದು, ಆಕೆಯೀಗ ಅದನ್ನು ಅಲ್ಲಗಳೆಯುತ್ತಿದ್ದಾಳೆ. ಖಾನ್‌ನೇ ಆಕೆಗೆ ಹಣವನ್ನು ನೀಡಿದ್ದಾನೆ ಎಂದು ವಾದಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹದಿಹರೆಯದ ಯುವತಿಯ ಮೇಲೆ ಅತ್ಯಾಚಾರ: 3 ಆರೋಪಿಗಳು ಅರೆಸ್ಟ್