Publish Date: Thu, 15 Aug 2019 (09:52 IST)
Updated Date: Thu, 15 Aug 2019 (09:54 IST)
ಲಕ್ನೋ : ಸಾಮಾನ್ಯವಾಗಿ ರಕ್ಷಾಬಂಧನ ದಿನದಂದು ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ಆದರೆ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ರಕ್ಷಾ ಬಂಧನದಂದು ಗೋವುಗಳಿಗೆ ರಾಖಿ ಕಟ್ಟುವುದಾಗಿ ಘೋಷಣೆ ಮಾಡಿದ್ದಾರೆ.
ಹೌದು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಆಪ್ತ ಹಾಗೂ ಬಿಜೆಪಿ ಶಾಸಕ ಭುಕ್ಕಲ್ ನವಾಬ್ ಗೋವುಗಳಿಗೆ ರಾಖಿ ಕಟ್ಟುವುದಾಗಿ ಘೋಷಣೆ ಮಾಡಿದವರು. ಲಕ್ನೋದ ಕುಬಿಯಾಘಾಟ್‌ನಲ್ಲಿ ಹಮ್ಮಿಕೊಳ್ಳಲಾಗುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಈ ರೀತಿಯಾಗಿ ಹೇಳಿದ್ದಾರೆ.
ರಕ್ಷಾ ಬಂಧನದ ದಿನ ಗೋಪೂಜೆ ಮಾಡಿ ನಂತರ ರಾಖಿ ಕಟ್ಟಲಿದ್ದೇವೆ. ಗೋವುಗಳಿಗೆ ರಾಖಿ ಕಟ್ಟುವುದರಿಂದ ಮನುಷ್ಯ ಮತ್ತು ಗೋವುಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.