Select Your Language

Notifications

webdunia
webdunia
webdunia
webdunia

ನೀರನ್ನು ಪೂರೈಸುತ್ತಿದ್ದ ಹ್ಯಾಂಡ್ ಪಂಪ್ ಗೆ ಸ್ಥಳೀಯರು ‘ಅನಾರ್ಕಲಿ’ ಎಂದು ಹೆಸರಿಟ್ಟಿದ್ದೇಕೆ?

ನೀರನ್ನು ಪೂರೈಸುತ್ತಿದ್ದ ಹ್ಯಾಂಡ್ ಪಂಪ್ ಗೆ ಸ್ಥಳೀಯರು ‘ಅನಾರ್ಕಲಿ’ ಎಂದು ಹೆಸರಿಟ್ಟಿದ್ದೇಕೆ?
ಲಕ್ನೋ , ಬುಧವಾರ, 3 ಜುಲೈ 2019 (09:07 IST)
ಲಕ್ನೋ : ಲಕ್ನೋದ ವಸತಿ ಗೃಹದ ಬಳಿ ನಿರ್ಮಿಸಲಾದ ಹ್ಯಾಂಡ್ ಪಂಪ್ ವೊಂದು ಒಂದು ವಿಶಿಷ್ಟ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.




ಹೌದು. ಸಾವಿರಾರು ಜನರಿಗೆ ನೀರನ್ನು ಪೂರೈಸುತ್ತಿದ್ದ ಹ್ಯಾಂಡ್ ಪಂಪ್ ವೊಂದನ್ನು ತೆಗೆದು ಹಾಕುವ ಬದಲು  ವಸತಿ ಹಾಗೂ ಅಭಿವೃದ್ಧಿ ಮಂಡಳಿ ಸಂಕೀರ್ಣದ ಗಡಿ ಗೋಡೆಗಳನ್ನು ಅದರ ಮೇಲೆಯೇ ಅಂದರೆ ಗೋಡೆಯ ಒಳಗೆ ಅರ್ಧ ಭಾಗ ಹೊರಗೆ ಅರ್ಧ ಭಾಗ ಇಟ್ಟು  ಗಡಿ ಗೋಡೆ ನಿರ್ಮಿಸಲಾಗಿದೆ. ಇದಕ್ಕೆ ಸ್ಥಳೀಯರು ಪ್ರಸಿದ್ಧ ಐತಿಹಾಸಿಕ ಹೆಸರು ‘ಅನಾರ್ಕಲಿ’ ಎಂದು  ನಾಮಕರಣ ಮಾಡಿದ್ದಾರೆ.ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಹ್ಯಾಂಡ್ ಪಂಪ್ ಗೆ ‘ಅನಾರ್ಕಲಿ’ ಎಂದು  ಹೆಸರಿಡಲು ಒಂದು ಕಾರಣವಿದೆ. ಅದೇನೆಂದರೆ ಮೊಘಲ್ ಕಥೆಗಳಲ್ಲಿ ಅನಾರ್ಕಲಿ ಎಂಬ  ಲಾಹೋರ್ ಮೂಲದ ವೇಶ್ಯಯೊಬ್ಬಳು ,ರಾಜ ಕುಮಾರ ನೂರ್-ಉದ್-ದಿನ್ ಮಹಮ್ಮದ್ ಸಲೀಮ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಕಾರಣದಿಂದ ಮೊಘಲ್ ಚಕ್ರವರ್ತಿ ಅಕ್ಬರ್ ಆಕೆಯ ಸುತ್ತ ಗೋಡೆ ನಿರ್ಮಾಣ ಮಾಡಿ ಅಲ್ಲೇ ಸಾಯುವಂತೆ ಶಿಕ್ಷೆ ನೀಡಿದ್ದ. ಈ ಹಿನ್ನಲೆಯಲ್ಲಿ ಆ ಹ್ಯಾಂಡ್ ಪಂಪ್ ಗೂ ‘ಅನಾರ್ಕಲಿ’ ಎಂದು  ನಾಮಕರಣ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಂಡುಬಂದ ಸತ್ತ ಮಸ್ಸೆಲ್ ಗಳು. ಕಾರಣವೇನು ಗೊತ್ತಾ?