Publish Date: Sat, 12 Dec 2020 (17:13 IST)
Updated Date: Sat, 12 Dec 2020 (17:15 IST)
ತನ್ನದಲ್ಲದ ತಪ್ಪಿಗೆ ಯುವಕನೊಬ್ಬ ವಿನಾಕಾರಣ ಭೀಕರವಾಗಿ ಹೆಣವಾಗಿದ್ದಾನೆ.
ದೆಹಲಿಯಲ್ಲಿ ಎರಡು ಬಣಗಳ ನಡುವಿನ ಹೊಡೆದಾಟದಲ್ಲಿ ಯುವಕ ನೀರಜ್ ಎಂಬಾತನಿಗೆ 20 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಜಗಳದಲ್ಲಿ ನಡುವೆ ಬಂದ ನೀರಜ್ ನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಸಫ್ದರ್ ಗಂಜ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿಗಳ ನಡುವೆ ಜಗಳ ನಡೆದಿದ್ದು, ನೀರಜ್ ಕೊಲೆಯಾದರೆ ಇಬ್ಬರು ಗಾಯಗೊಂಡಿದ್ದಾರೆ.
ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.