Publish Date: Sat, 12 Dec 2020 (16:02 IST)
Updated Date: Sat, 12 Dec 2020 (16:04 IST)
ಬಿಜೆಪಿಯವರಿಗೆ ಈಗಂತೂ ನಮ್ಮ ಅಗತ್ಯ ಇಲ್ಲ. ಆದರೆ ಮುಂದಿನ ಸಿಎಂ ವಿಷಯದಲ್ಲಿ ಏನೂ ಆಗಬಹುದು. ರಾಜಕೀಯದಲ್ಲಿ ಏನೇನೋ ಆಗಬಹುದು ಎಂದು ಮಾಜಿ ಸಿಎಂ ಹೊಸ ಬಾಂಬ್ ಸಿಡಿಸಿದ್ಧಾರೆ.
ಜೆಡಿಎಸ್ ನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಪ್ರಶ್ನೆ ಇಲ್ಲ ಎಂದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮುಂದೆ ರಾಜ್ಯಕ್ಕೆ ಕುಮಾರಸ್ವಾಮಿ ಅನಿವಾರ್ಯ ಎಂಬುದು ಆಗಬಹುದು ಎಂದು ಹೇಳಿಕೆ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ಕುಮಾರಣ್ಣ ಮತ್ತೆ ಬೇಕು ಎಂದು ರಾಜ್ಯದ ಜನ ನಿರ್ಧಾರ ಮಾಡಬಹುದು ಎಂದ ಹೆಚ್.ಡಿ.ಕೆ., ರಾಜಕೀಯದಲ್ಲಿ ಏನು ಬೇಕಾದರೂ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.