Webdunia - Bharat's app for daily news and videos

Install App

ಮತ್ತೆ ನೋಟು ಬ್ಯಾನ್ ಆಗುತ್ತಾ ?

Webdunia
ಭಾನುವಾರ, 29 ಮೇ 2022 (17:02 IST)
ಮುಂಬೈ : 2000 ರು. ನೋಟುಗಳ ಚಲಾವಣೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

2020ರಲ್ಲಿ ಶೇ.2.4ರಷ್ಟಿದ್ದ ಇದರ ಚಲಾವಣೆ, 2022ರ ಮಾರ್ಚ್ ಅಂತ್ಯದ ವೇಳೆ ಶೇ. 1.6ಕ್ಕೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

‘ಈ ವರ್ಷ ಮಾಚ್ರ್ ತಿಂಗಳಿನ ಅಂತ್ಯದವರೆಗೆ ಚಲಾವಣೆಯಲ್ಲಿರುವ ಒಟ್ಟಾರೆ ಎಲ್ಲ ಮುಖಬೆಲೆಯ ಒಟ್ಟು ಕರೆನ್ಸಿ ನೋಟುಗಳ ಸಂಖ್ಯೆಯು 13,053 ಕೋಟಿಯಷ್ಟಿದೆ. ಕಳೆದ ವರ್ಷ ಇದು 12,437 ಕೋಟಿಯಷ್ಟಿತ್ತು. ಆದರೆ, ಚಲಾವಣೆಯಲ್ಲಿರುವ 2000 ರು. ಮುಖಬೆಲೆಯ ನೋಟುಗಳ ಸಂಖ್ಯೆಯು 214 ಕೋಟಿಗೆ ಇಳಿಕೆಯಾಗಿದೆ.

ಚಲಾವಣೆಯಲ್ಲಿರುವ ಎಲ್ಲ ಮುಖಬೆಲೆಯ ನೋಟುಗಳ ಪೈಕಿ 2000 ರು. ನೋಟುಗಳ ಪ್ರಮಾಣ ಕೇವಲ ಶೇ.1.6ರಷ್ಟಿದೆ. 2020ರಲ್ಲಿ ಇದರ ಪ್ರಮಾಣ ಶೇ.2.4 ಹಾಗೂ 2021ರಲ್ಲಿ ಶೇ.2 ರಷ್ಟಿತ್ತು’ ಎಂದಿದೆ. ‘ಆದರೆ ಚಲಾವಣೆಯಲ್ಲಿರುವ 500 ರು. ಮುಖಬೆಲೆಯ ನೋಟುಗಳ ಸಂಖ್ಯೆಯು 4,554.68 ಕೋಟಿಗೆ ಏರಿಕೆಯಾಗಿದ್ದು, ಚಲಾವಣೆಯಲ್ಲಿರುವ ಒಟ್ಟು ನಗದಿನ ಪ್ರಮಾಣದಲ್ಲಿ ಶೇ. 34.9 ರಷ್ಟುಪಾಲು ಹೊಂದಿದೆ’ ಎಂದು ಆರ್ಬಿಐ ತಿಳಿಸಿದೆ.

2022ರ ಮಾಚ್ರ್ಗೆ ಮುಕ್ತಾಯವಾದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಎಲ್ಲ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯವು 31.05 ಲಕ್ಷ ಕೋಟಿ ರು.ನಷ್ಟಿದೆ ಎಂದು ತಿಳಿಸಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಂಡಮಾರುತ ಎಫೆಕ್ಟ್‌, ದೇಶದ ಈ ಭಾಗದಲ್ಲಿ ಆ.7ರ ವರೆಗೆ ಭಾರೀ ಮಳೆ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್‌ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಸೇನಾಧಿಕಾರಿ, ಕಾರಣ ಇಲ್ಲಿದೆ

ಭಾರೀ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ ಮೋದಿ

ಉತ್ತರಪ್ರದೇಶ: ಪೃಥ್ವಿನಾಥ ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 11 ಮಂದಿ

ಮೀರತ್‌ ಭಯಾನಕ ಅಪರಾಧ: 7 ತಿಂಗಳ ಗರ್ಭಿಣಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ

ಮುಂದಿನ ಸುದ್ದಿ
Show comments