Publish Date: Mon, 05 Nov 2018 (06:50 IST)
Updated Date: Mon, 05 Nov 2018 (06:51 IST)
ನವದೆಹಲಿ: ಮದುವೆಯಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಪುರುಷರಿಗೆ ಯೋಗ ಗುರು ಬಾಬಾ ರಾಮ್ ದೇವ್ ಷರತ್ತೊಂದನ್ನು ವಿಧಿಸಿದ್ದಾರೆ.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ವಿವಾಹಿತ ಪುರುಷರ ಮತದಾನ ಹಕ್ಕು ರದ್ದುಗೊಳಿಸಬೇಕು. ಒಂದು ವೇಳೆ ಮದುವೆಯಾಗುವುದಿದ್ದರೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹಡೆಯಬಾರದು ಎಂದು ಬಾಬಾ ರಾಮ್ ದೇವ್ ಕಾರ್ಯಕ್ರಮವೊಂದರಲ್ಲಿ ಷರತ್ತು ವಿಧಿಸಿದ್ದಾರೆ.
ಅಷ್ಟೇ ಅಲ್ಲ, ತನ್ನ ಹಾಗೆ ಮದುವೆಯಾಗದ ಪುರುಷರಿದ್ದರೆ ಅವರಿಗೆ ಸನ್ಮಾನ ಮಾಡಬೇಕು ಎಂದೂ ಅವರು ಸಲಹೆ ಕೊಟ್ಟಿದ್ದಾರೆ! ಬಾಬಾ ರಾಮ್ ದೇವ್ ಈ ಹೇಳಿಕೆ ವಿವಾದವಾಗುವ ಲಕ್ಷಣಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.