Select Your Language

Notifications

webdunia
webdunia
webdunia
webdunia

ವಯಸ್ಸು 40 ದಾಟಿದ ನಂತರ ಬರುವ ಲೈಂಗಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಪುರುಷರು ಈ ಆಹಾರ ಸೇವಿಸಿ

ವಯಸ್ಸು 40 ದಾಟಿದ ನಂತರ ಬರುವ ಲೈಂಗಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಪುರುಷರು ಈ ಆಹಾರ ಸೇವಿಸಿ
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (13:00 IST)
ಬೆಂಗಳೂರು : ಪುರುಷರ ವಯಸ್ಸು 40 ದಾಟಿದ ನಂತರ ಕೆಲಸದ ಒತ್ತಡ, ಅನಾರೋಗ್ಯಗಳಿಂದ ಲೈಂಗಿಕ ಸಮಸ್ಯೆ ಹೆಚ್ಚಾಗಬಹುದು. ಆದರೆ ಪುರುಷರು ಉತ್ತಮ ಜೀವನಶೈಲಿ ಜತೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂಗಿಕ ಸಮಸ್ಯೆಗಳ ವಿರುದ್ಧ ಹೋರಾಡಬಹುದು.


ಬೀಟ್‌ರೂಟ್‌ :ಪುರುಷರಲ್ಲಿ ಲೈಂಗಿಕ ಕಾರ್ಯಕ್ಷ ಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್‌ರೂಟ್‌ಗೆ ಇದೆ. ನಿತ್ಯ ಬೀಟ್‌ರೂಟ್‌ ರಸ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮಿರುವಿಕೆಯ ಸಮಸ್ಯೆಯನ್ನು ಇದು ನಿವಾರಿಸಲಿದೆ.


ಮೆಣಸು :ಲೈಂಗಿಕ ಜೀವನವನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಮೆಣಸು ಇರಲಿ. ಸ್ನಾಯುಗಳು, ಹೃದಯ, ಸೇರಿದಂತೆ ಲೈಂಗಿಕ ಅಂಗಗಳಿಗೆ ಉತ್ತಮ ರಕ್ತದ ಹರಿವನ್ನು ಒದಗಿಸುತ್ತದೆ.


ಬ್ರೊಕೋಲಿ: ಅತ್ಯಂತ ಆರೋಗ್ಯಪೂರ್ಣವಾದದ್ದು ಬ್ರಕೋಲಿ. ಇದು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಟೆಸ್ಟೋಸ್ಟೆರಾನ್‌ ಮಟ್ಟವನ್ನು ಹೆಚ್ಚಿಸುತ್ತದೆ.


ಡಾರ್ಕ್‌ ಚಾಕೊಲೇಟ್‌ :ಇದು ರಕ್ತದೊತ್ತಡವನ್ನು ಸಮಪ್ರಮಾಣದಲ್ಲಿ ಇಡುತ್ತದೆ. ಕೊಲೆಸ್ಟ್ರಾಲ್‌ ಅನ್ನು ಕಡಿಮೆಗೊಳಿಸುತ್ತದೆ. ಇದು ಲೈಂಗಿಕತೆಯನ್ನು ಕೂಡ ಉತ್ತೇಜಿಸುತ್ತದೆ.


ಮೆಂತ್ಯೆ :ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಸರಾಗಗೊಳಿಸುವ ಸಾಮರ್ಥ್ಯ‌ವನ್ನು ಹೊಂದಿದೆ. ಅಲ್ಲದೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಯಾವುದೇ ಆಹಾರದ ಮೂಲಕ ಸೇವಿಸಬಹುದು.


ದಾಳಿಂಬೆ :ಟೆಸ್ಟೋಸ್ಟೆರಾನ್‌ ಹಾರ್ಮೋನ್‌ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ. ಮೂಡನ್ನು ಉತ್ತೇಜಿಸುವುದರ ಜತೆ ರಕ್ತ ಸಂಚಾರ ಸರಾಗವಾಗುವಂತೆ ಮಾಡುತ್ತದೆ.


ಕಲ್ಲಂಗಡಿ:40 ವರ್ಷದ ನಂತರ ಪುರುಷರು ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಇದರಿಂದ ಉದ್ರೇಕ ಸಮಸ್ಯೆಯಿಂದ ಮುಕ್ತರಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಬಳಿಕ ಬೇಸರಗೊಳ್ಳುತ್ತಿದ್ದರೆ ಅಸಡ್ಡೆ ಮಾಡಬೇಡಿ