Publish Date: Thu, 04 Nov 2021 (09:52 IST)
Updated Date: Thu, 04 Nov 2021 (09:58 IST)
ಉತ್ತರ ಪ್ರದೇಶದ ಮೀರತ್ ನಲ್ಲಿ ಇಬ್ಬರು ಯುವಕರನ್ನು ಬೆತ್ತಲೆಗೊಳಿಸಿ ಹುಡುಗಿಯೊಂದಿಗೆ ಅಶ್ಲೀಲ ರೀತಿಯಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಡಿಯೋ ಇಟ್ಟುಕೊಂಡು ಮೂರು ಲಕ್ಷ ರು. ಆರೋಪಿಗಳು ಬೇಡಿಕೆ ಇಡಲು ಮುಂದಾಗಿದ್ದರು. ಜಿಲ್ಲೆಯ ಖರ್ಖೌಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರು ಮಂದಿ ಯುವಕರು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.
ಗನ್ ತೋರಿಸಿ ಭಯ ಹುಟ್ಟಿಸಿದ ತಂಡ ಯುವಕರಿಂದ ಮೊಬೈಲ್ ಫೋನ್ ಮತ್ತು 32,000 ರೂ ನಗದು ದೋಚಿದೆ. ಸಂತ್ರಸ್ತರು ಖರ್ಖೌಡಾ ಪೊಲೀಸರಿಗೆ ದೂರು ನೀಡಿದ್ದು ಭಾನುವಾರ ರಾತ್ರಿ ಲೋಹಿಯಾನಗರ ಮಂಡಿಯಲ್ಲಿ ಪಾರ್ಟಿ ಕೊಡಿಸುವ ನೆಪದಲ್ಲಿ ಆರು ಮಂದಿ ನಮ್ಮನ್ನು ಕರೆದುಕೊಂಡು ಹೋಗಿದ್ದರು ಎಂದು ಜುಬೇರ್ ಮತ್ತು ಆತನ ಸ್ನೇಹಿತ ಶಹಬಾಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಮೂರು ಲಕ್ಷ ರು. ನೀಡಲು ಒಪ್ಪಿಕೊಂಡ ಮೇಲೆ ತಂಡ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮೊಲದಲಿಗೆ ಪೊಲೀಸರ ಬಳಿ ಹೋದಾಗ ಪೊಲೀಸರೇ ಆರೋಪಿಗಳ ಪರ ನಿಂತು ಕಾಂಪ್ರಮೈಸ್ ಮಾಡಿಕೊಂಡಿ ಎಂದಿದ್ದಾರೆ ಎನ್ನುವ ಆರೋಪವನ್ನು ಸಂತ್ರಸ್ತರು ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದ ಯಾವ ತಪ್ಪು ಹೆಜ್ಜೆಯೂ ಆಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಇನ್ಸ್ ಪೆಕ್ಟರ್ ಸಂಜಯ್ ಶರ್ಮಾ ತಿಳಿಸಿದ್ದಾರೆ.
ಪ್ರೇಮಿಗಳ ಟಾರ್ಗೆಟ್
ಹೊಸಕೋಟೆ ತಾ. ಹಂದೇನಹಳ್ಳಿಯ ಲೇಔಟ್ನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳನ್ನು ಕಾಡುತ್ತಿದ್ದ ತಂಡದ ಕೃತ್ಯವೂ ವರದಿಯಾಗಿತ್ತು. ಏಕಾಂತದಲ್ಲಿದ್ದ ಯುವಕ-ಯುವತಿಯ ವಿಡಿಯೋ ಮಾಡಿ, 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದು ಪ್ರಕರಣ ದಾಖಲಾಗಿತ್ತು.