Select Your Language

Notifications

webdunia
webdunia
webdunia
webdunia

ನಾಗಚೈತನ್ಯ ಪಾರ್ಟಿಯಲ್ಲಿ ಸಮಂತಾ ಮಿಸ್ಸಿಂಗ್: ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುರಾವೆ ಸಿಕ್ತು

ನಾಗಚೈತನ್ಯ ಪಾರ್ಟಿಯಲ್ಲಿ ಸಮಂತಾ ಮಿಸ್ಸಿಂಗ್: ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುರಾವೆ ಸಿಕ್ತು
ಹೈದರಾಬಾದ್ , ಶನಿವಾರ, 25 ಸೆಪ್ಟಂಬರ್ 2021 (16:41 IST)
ಹೈದರಾಬಾದ್: ಟಾಲಿವುಡ್ ನ ಮೋಸ್ಟ್ ವಾಂಟೆಡ್ ಕಪಲ್ ಎನಿಸಿಕೊಂಡಿದ್ದ ನಾಗಚೈತನ್ಯ ಮತ್ತು ಸಮಂತಾ ಋತು ಪ್ರಭು ವೈವಾಹಿಕ ಬದುಕು ವಿಚ್ಛೇದನದತ್ತ ಸಾಗಿದೆ ಎಂಬ ಸುದ್ದಿಗಳಿವೆ. ಅದಕ್ಕೆ ಪೂರಕವೆಂಬಂತೆ ಇಬ್ಬರೂ ಈಗ ಜೊತೆಯಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ತಮ್ಮ ವಿಚ್ಛೇದನ ಸುದ್ದಿಯನ್ನೂ ಅಲ್ಲಗಳೆದಿಲ್ಲ.

 

ಇದೀಗ ‘ಲವ್ ಸ್ಟೋರಿ’ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ನಾಗಚೈತನ್ಯ ತಮ್ಮ ನಿವಾಸದಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ನಾಗಚೈತನ್ಯ ತಂದೆ ನಾಗಾರ್ಜುನ, ಬಾಲಿವುಡ್ ನಟ ಅಮೀರ್ ಖಾನ್, ಲವ್ ಸ್ಟೋರಿ ಸಿನಿಮಾ ನಾಯಕಿ ಸಾಯಿ ಪಲ್ಲವಿ ಭಾಗಿಯಾಗಿದ್ದರು. ಆದರೆ ಸಮಂತಾ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಹೀಗಾಗಿ ಇಬ್ಬರೂ ಜೊತೆಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಲ್ಲದೆ, ವಿಚ್ಛೇದನ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ನಾಗಚೈತನ್ಯ ಬಾಲಿವುಡ್ ಗೆ ಕಾಲಿಡುತ್ತಿದ್ದು, ‘ಲಾಲ್ ಸಿಂಗ್ ಛಡ್ಡಾ’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ ಅಕ್ಕಿನೇನಿ ಮನೆಯ ಪಾರ್ಟಿಗೆ ಅವರೂ ಆಗಮಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಅನೌನ್ಸ್ ಆಯ್ತು ಮೊದಲ ಸಿನಿಮಾ ರಿಲೀಸ್ ಡೇಟ್