Publish Date: Thu, 06 Aug 2026 (14:20 IST)
Updated Date: Thu, 06 Aug 2026 (14:23 IST)
ಝಾನ್ಸಿ (ಉತ್ತರ ಪ್ರದೇಶ): ಹತ್ಯೆಗೀಡಾದ ಗ್ಯಾಂಗ್‌ಸ್ಟರ್, ಮಾಜಿ ರಾಜಕಾರಣಿ ಅತೀಕ್ ಅಹ್ಮದ್‌ನ ಅತ್ಯಂತ ಕಿರಿಯ ಮಗ ಅಬಾನ್ ಅಹ್ಮದ್ ರಸ್ತೆ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟಿದ್ದಾನೆ. ಝಾನ್ಸಿ ಜೈಲಿನಲ್ಲಿರುವ ತನ್ನ ಅಣ್ಣ ಅಲಿ ಅಹ್ಮದ್‌ನನ್ನು ಭೇಟಿಯಾಗಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಅಬಾನ್ ಅಹ್ಮದ್ ಹಾಗೂ ಆತನ ಸ್ನೇಹಿತರು ಪ್ರಯಾಗ್‌ರಾಜ್‌ನಿಂದ ಝಾನ್ಸಿಯತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಝಾನ್ಸಿಯ ಪೂಂಚ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿದ್ದ ಸಿಮೆಂಟ್ ಡಿವೈಡರ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿಜ್ಜುಗುಜ್ಜಾಗಿದ್ದು, ಅಬಾನ್ ಅಹ್ಮದ್ ಹಾಗೂ ಆತನ ಸ್ನೇಹಿತ ಸಾಹಿಲ್ ಅಲಿಯಾಸ್ ಸೋನು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಝೈದ್, ಉಮರ್ ಸೇರಿದಂತೆ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣ ಮತ್ತು ಅತೀಕ್ ಕುಟುಂಬದ ಮೇಲಿನ ಕ್ರಿಮಿನಲ್ ಪ್ರಕರಣಗಳ ಸಮಯದಲ್ಲಿ ಅಬಾನ್ ನಾಬಾಲಕನಾಗಿದ್ದನು. ಆದ್ದರಿಂದ ಆತನನ್ನು ಬಾಲ ಮಂದಿರದಲ್ಲಿ ಇರಿಸಲಾಗಿತ್ತು. ನಂತರ ಅಕ್ಟೋಬರ್ 2023 ರಲ್ಲಿ ನ್ಯಾಯಾಲಯದ ಆದೇಶದಂತೆ ಆತನನ್ನು ಬಾಲ ಸಂರಕ್ಷಣಾ ಗೃಹದಿಂದ ಬಿಡುಗಡೆ ಮಾಡಿ ಅತ್ತೆಯ ಸುಪರ್ದಿಗೆ ಒಪ್ಪಿಸಲಾಗಿತ್ತು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ