Select Your Language

Notifications

webdunia
webdunia
webdunia
webdunia

ಭಾವಿ ಪತಿಯನ್ನೇ ಬಂಧಿಸಿದ್ದ ಲೇಡಿ ಸಿಂಗಂ ಅರೆಸ್ಟ್!

Assam Lady Singham ಅಸ್ಸಾಂ ಲೇಡಿ ಸಿಂಗಂ ಭ್ರಷ್ಟಾಚಾರ
bengaluru , ಭಾನುವಾರ, 5 ಜೂನ್ 2022 (14:28 IST)

ಭ್ರಷ್ಟಾಚಾರ ಆರೋಪದ ಮೇಲೆ ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎಂದೇ ಖ್ಯಾತರಾಗಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ ಮೊನಿ ರಬ್ಬಾ ಇದೀಗ ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಅಸ್ಸಾಂನ ನಾಗೋನ್ ಜಿಲ್ಲೆಯ ಸಬ್ ಇನ್ ಸ್ಪೆಕ್ಟರ್ ಆಗಿರುವ ಜುನ್ ಮೊನಿ ರಬ್ಬಾ ಮಾಜಿ ಗೆಳೆಯನೊಂದಿಗೆ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರಬ್ಬಾಸ್ ಮಾಜಿ ಗೆಳೆಯ ರಾಣಾ ಪರಾಗ್ ನೊಂದಿಗೆ ನಾವು ಹಣಕಾಸು ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದು, ಮಜುಲಿಗೆ ವರ್ಗಗೊಂಡು ಬಂದಾಗ ಜುನ್ ಮೊನಿ ರಬ್ಬಾ ಅವರು ತಮ್ಮ ಗೆಳೆಯನನ್ನು ಪರಿಚಯಿಸಿದ್ದರಿಂದ ನಾವು ವ್ಯವಹಾರ ಮಾಡಿದ್ದೆವು. ಆದರೆ ಅವರು ನಮಗೆ ವಂಚಿಸಿದ್ದಾರೆ ಎಂದು ಇಬ್ಬರು ಗುತ್ತಿಗೆದಾರರು ದೂರು ನೀಡಿದ್ದಾರೆ.

ಇದಕ್ಕೂ ಮುನ್ನ ಪರಾಗ್ ಅವರನ್ನು ಒಎನ್ ಜಿಸಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಜುನ್ ಮೊನ್ ರಬ್ಬಾ ಬಂಧಿಸಿದ್ದರು. ಇದೇ ವೇಳೆ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಹೆಸರಿನಲ್ಲಿ ಖಾತೆ ತೆರೆದು ಅಶ್ಲೀಲ ವಿಡಿಯೋ ಪೋಸ್ಟ್ ಮಾಡುತ್ತಿದ್ದ ವಿದ್ಯಾರ್ಥಿ