Select Your Language

Notifications

webdunia
webdunia
webdunia
webdunia

ಅಂಡಾಣು ದಾನಕ್ಕೆ ಮಗಳಿಗೆ ಬಲವಂತ ಮಾಡಿದ ತಾಯಿ ಅರೆಸ್ಟ್

ಅಂಡಾಣು ದಾನಕ್ಕೆ ಮಗಳಿಗೆ ಬಲವಂತ ಮಾಡಿದ ತಾಯಿ ಅರೆಸ್ಟ್
ಚೆನ್ನೈ , ಭಾನುವಾರ, 5 ಜೂನ್ 2022 (09:00 IST)
ಚೆನ್ನೈ: ತಾಯ್ತನ ಭಾಗ್ಯವಿಲ್ಲದವರಿಗೆ ಆರೋಗ್ಯವಂತ ಮಹಿಳೆಯರು ಅಂಡಾಣು ದಾನ ಮಾಡುವ ಮೂಲಕ ಬಂಜೆತನ ನಿವಾರಣೆಗೆ ಸಹಾಯ ಮಾಡಬಹುದು. ವೈದ್ಯಕೀಯ ಲೋಕದ ಈ ಆಧುನಿಕ ತಂತ್ರಜ್ಞಾನ ಈಗ ಮಾರಾಟ ದಂಧೆಯಾಗಿದೆ.

ಇದೇ ರೀತಿ ತಾಯಿಯೊಬ್ಬಳು ತನ್ನ 16 ವರ್ಷದ ಮಗಳಿಗೆ ದುಡ್ಡಿನಾಸೆಗೆ ಅಂಡಾಣು ದಾನ ಮಾಡಲು ಬಲವಂತ ಮಾಡಿದ್ದಕ್ಕೆ ಬಂಧನಕ್ಕೊಳಗಾಗಿದ್ದಾಳೆ. ತಮಿಳುನಾಡಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

ತಾಯಿಯೇ ಖಾಸಗಿ ಸಂಸ್ಥೆಯೊಂದಕ್ಕೆ ಮಗಳ ಅಂಡಾಣು ದಾನಕ್ಕೆ ಬಲವಂತ ಮಾಡಿದ್ದಾಳೆ. ತಾಯಿ ಎರಡನೇ ಮದುವೆಯಾಗಿದ್ದು, ಮಲ ತಂದೆಯೂ ಈ ಕೃತ್ಯಕ್ಕೆ ಸಹಕರಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಅದು ಹೇಗೋ ಅವರಿಂದ ತಪ್ಪಿಸಿಕೊಂಡ ಅಪ್ರಾಪ್ತ ಬಾಲಕಿ ಪೊಲೀಸರ ಸಹಾಯ ಪಡೆದಿದ್ದಾಳೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ ಆರ್ಡರ್ ಮಾಡಿದ ವ್ಯಕ್ತಿಗೆ ಕಪ್ ನಲ್ಲಿ ಸಿಕ್ಕಿದ್ದೇನು ಗೊತ್ತಾ?!