Publish Date: Sun, 05 Jun 2022 (08:40 IST)
Updated Date: Sun, 05 Jun 2022 (08:55 IST)
ನವದೆಹಲಿ: ಹೋಟೆಲ್ ಗಳಲ್ಲಿ ಕಾಫಿ, ಚಹಾ ಆರ್ಡರ್ ಮಾಡಿದಾಗ ಹಿಂದೆ ಮುಂದೆ ನೋಡದೇ ಅದರ ಸ್ವಾದ ಅನುಭವಿಸಿ ಹೀರಿಕೊಳ್ಳುತ್ತೇವೆ. ಆದರೆ ಇದೇ ರೀತಿ ತನಗೆ ಬಂದ ಕಾಫಿ ಕುಡಿಯಲು ಹೋದ ವ್ಯಕ್ತಿಗೆ ಆಘಾತ ಕಾದಿತ್ತು.
ಸೌರಬ್ ಎಂಬಾತ ದೆಹಲಿಯ ರೆಸ್ಟೋರೆಂಟ್ ಒಂದರಿಂದ ಝೊಮೆಟೋ ಆಪ್ ಮೂಲಕ ಕಾಫಿ ಆರ್ಡರ್ ಮಾಡಿದ್ದ. ಕಾಫಿಯೇನೋ ಬಂತು. ಆತನ ಪತ್ನಿ ಕಾಫಿ ಹೀರುವಾಗ ಕೊನೆಯಲ್ಲಿ ಚಿಕನ್ ಪೀಸ್ ಸಿಕ್ಕಿದೆ!
ಹೇಳಿ ಕೇಳಿ ಆಕೆ ಪಕ್ಕಾ ಸಸ್ಯಾಹಾರಿಯಂತೆ. ಕಾಫಿ ತಳದಲ್ಲಿ ಚಿಕನ್ ಪೀಸ್ ನೋಡಿ ಆಕೆಯ ಸ್ಥಿತಿ ಏನಾಗಿರಬೇಡ ಹೇಳಿ? ಬಳಿಕ ಸೌರಬ್ ಅದನ್ನು ಫೋಟೋ ಸಮೇತ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ನನಗೆ ಝೊಮೆಟೊ ಸಂಸ್ಥೆ ಉಚಿತ ಸದಸ್ಯತ್ವ ಆಫರ್ ನೀಡುತ್ತಿದೆ. ಇನ್ಮುಂದೆ ತಪ್ಪಿಯೂ ಇವರ ಮೂಲಕ ಯಾವ ವಸ್ತುವನ್ನೂ ಆರ್ಡರ್ ಮಾಡಲ್ಲ ಎಂದು ಸೌರಬ್ ಬರೆದುಕೊಂಡಿದ್ದಾರೆ.