Select Your Language

Notifications

webdunia
webdunia
webdunia
webdunia

ಕಾಫಿ ವಿತ್ ಕರಣ್ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್

ಕಾಫಿ ವಿತ್ ಕರಣ್ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್
ಮುಂಬೈ , ಮಂಗಳವಾರ, 24 ಮೇ 2022 (09:00 IST)
ಮುಂಬೈ: ಕೆಜಿಎಫ್ 2 ಬಂದ ಮೇಲೆ ಬಾಲಿವುಡ್ ನಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ ಜೋರಾಗಿದೆ. ಈಗ ಹಿಂದಿ ಕಿರುತೆರೆಯ ಪ್ರಸಿದ್ಧ ಶೋ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿಯಿದೆ.

ಸದ್ಯದಲ್ಲೇ ಕಾಫಿ ವಿತ್ ಕರಣ್ ಶೋನ ಏಳನೇ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ. ಈ ಬಾರಿ ಇದು ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿಯಿದೆ.

ಇದರ ನಡುವೆ ಅತಿಥಿಗಳು ಯಾರೆಲ್ಲಾ ಬರಬಹುದು ಎಂದು ಲೆಕ್ಕಾಚಾರ ಶುರುವಾಗಿದೆ. ಆ ಪ್ರಕಾರ ರಾಕಿಂಗ್ ಸ್ಟಾರ್ ಯಶ್, ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ನಯನತಾರಾ ಸೇರಿದಂತೆ ದಕ್ಷಿಣದ ಘಟಾನುಘಟಿಗಳ ಹೆಸರು ಕೇಳಿಬರುತ್ತಿದೆ. ಇದುವರೆಗೆ ಈ ಶೋನಲ್ಲಿ ಕೇವಲ ಬಾಲಿವುಡ್ ತಾರೆಯರು ಮಾತ್ರ ಭಾಗವಹಿಸುತ್ತಿದ್ದರು. ಇದೀಗ ದಕ್ಷಿಣ ಭಾರತೀಯ ತಾರೆಯರ ದೊಡ್ಡ ಪಟ್ಟಿಯೇ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಣ್ ಜೋಹರ್ ಮೇಲೆ ಕತೆ ಕದ್ದ ಆರೋಪ