ಕೋಲ್ಕತ್ತಾ ವೈದ್ಯೆ ಮರ್ಡರ್ ಆರೋಪಿ ಸಂಜಯ್ ರಾಯ್ ಜೊತೆ ನಂಟಿದೆಯಾ ಎಂದು ಕೇಳಿದ್ದಕ್ಕೆ ಎದ್ನೋ ಬಿದ್ನೋ ಎಂದು ಓಡಿದ ಎಎಸ್ಐ (ವಿಡಿಯೋ)

Krishnaveni K
ಬುಧವಾರ, 21 ಆಗಸ್ಟ್ 2024 (16:05 IST)
Photo Credit: X
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯನ್ನು ರೇಪ್ ಮಾಡಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಸಂಜಯ್ ರಾಯ್ ಜೊತೆಗೆ ನಿಮಗೆ ನಂಟಿದೆಯಾ ಎಂದು ಕೇಳಿದ್ದಕ್ಕೆ ಕೋಲ್ಕತ್ತಾ ಎಎಸ್ಐ ಅನೂಪ್ ದತ್ತಾ ಎದ್ನೋ ಬಿದ್ನೋ ಎಂದು ಓಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರೋಪಿ ಸಂಜಯ್ ರಾಯ್ ಜೊತೆ ನಿಕಟ ಸಂಪರ್ಕ ಹೊಂದಿರುವ ಆಪಾದನೆ ಎಎಸ್ಐ ಅನೂಪ್ ದತ್ತಾ ಮೇಲಿದೆ. ಈ ಸಂಬಂಧ ಅವರನ್ನು ಸಿಬಿಐ ತನಿಖೆಗೊಳಪಡಿಸಿದೆ. ತನಿಖೆಗೆ ಹಾಜರಾಗಲು ಬಂದಾಗ ಮಾಧ್ಯಮಗಳು ಅವರನ್ನು ಮುತ್ತಿಕೊಂಡಿದ್ದು, ನಿಮಗೂ ಸಂಜಯ್ ರಾಯ್ ಗೂ ಸಂಬಂಧವಿದೆಯಾ ಎಂದು ಕೇಳಿದ್ದಾರೆ.

ಆದರೆ ಪತ್ರಕರ್ತರು ತಮ್ಮ ಎದುರು ಮೈಕ್ ಹಿಡಿಯುತ್ತಿದ್ದಂತೇ ಅನೂಪ್ ದತ್ತಾ ಓಡಿ ಹೋಗಿದ್ದಾರೆ. ಓಡುತ್ತಲೇ ಕಚೇರಿಯೊಳಗೆ ಅಡಗಿಕೊಂಡಿದ್ದಾರೆ. ಸಂಜಯ್ ರಾಯ್ ಮೊದಲು ಕೋಲ್ಕತ್ತಾ ಪೊಲೀಸರ ವಿಪತ್ತು ದಳದ ಸ್ವಯಂ ಸೇವಕನಾಗಿದ್ದ. ಬಳಿಕ ಆತನನ್ನು ಪೊಲೀಸ್ ವೆಲ್ ಫೇರ್ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ಹೀಗಾಗಿ ಸಂಜಯ್ ಯಾವಾಗಲೂ ತಾನು ಪೊಲೀಸ್ ಅಧಿಕಾರಿ ಎಂಬಂತೆ ಪೋಸ್ ಕೊಡುತ್ತಿದ್ದ. ಕೋಲ್ಕತ್ತಾ ಪೊಲೀಸ್ ಎಂಬ ಟ್ಯಾಗ್ ಇದ್ದ ಟಿ-ಶರ್ಟ್ ಧರಿಸುತ್ತಿದ್ದ. ಆತನ ಬೈಕ್ ನಲ್ಲೂ ಪೊಲೀಸ್ ಎಂದು ಹಾಕಿಸಿಕೊಂಡಿದ್ದ. ಇದರಿಂದಾಗಿ ಎಲ್ಲರೂ ಆತನನ್ನು ಪೊಲೀಸ್ ಅಧಿಕಾರಿ ಎಂದುಕೊಂಡಿದ್ದರು. ಈ ಕಾರಣಕ್ಕೆ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್‌ ಸಿಎಂ ಆಗಬೇಕೆಂದ ಮಂಡ್ಯ ಶಾಸಕ, ಕಾರಣ ಕೊಟ್ಟಿದ್ದು ಹಾಗೇ

ಬೆಂಗಳೂರು ದರೋಡೆ ಕೇಸ್: ಒಟ್ಟು ಎಷ್ಟು ಹಣ ಸಿಕ್ಕಿದೆ ಪೊಲೀಸ್ ಆಯುಕ್ತರಿಂದ ಖಚಿತ ಮಾಹಿತಿ

ಮೆಗಾ ಸಿಟಿ ಪ್ರಾಜೆಕ್ಟ್, ಕೈ ಶಾಸಕ ಸಿಪಿ ಯೋಗೇಶ್ವರ್‌ಗೆ ಬಿಗ್ ರಿಲೀಫ್‌

ಕಾಂಗ್ರೆಸ್ ನಲ್ಲಿ ಕುರ್ಚಿ ಜಟಾಪಟಿ ನಡುವೆ ರಾಷ್ಟ್ರೀಯ ನಾಯಕರ ಭೇಟಿಯಾದ ವಿಜಯೇಂದ್ರ

ಸಿಎಂ ಆಗಲು ಮತ್ತೊಂದು ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments