Select Your Language

Notifications

webdunia
webdunia
webdunia
webdunia

ಬಿಹಾರ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಪಟ್ಟಿಯಲ್ಲಿ ಪಾಕ್‌ನ ಎರಡು ಪ್ರಜೆಗಳ ಹೆಸರು ಪತ್ತೆ

Bihar Assembly Elections, Central Election Commission, Pakistan Citizens

Sampriya

ಪಾಟ್ನಾ , ಭಾನುವಾರ, 24 ಆಗಸ್ಟ್ 2025 (12:58 IST)
ಪಾಟ್ನಾ: ಬಿಹಾರದ ಮತದಾರರ ಪಟ್ಟಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಹೆಸರಿರುವುದು ಪತ್ತೆಯಾಗಿದೆ. ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದೆ. 

1956ರಲ್ಲಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನದ ಇಬ್ಬರು ಮಹಿಳೆಯರನ್ನು ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಅವರ ಹೆಸರುಗಳನ್ನು ಪರಿಶೀಲಿಸಲಾಗಿದೆ.

ವೀಸಾ ಅವಧಿ ಮುಗಿದ ನಂತರವೂ ವಿದೇಶಿಯರು ಇಲ್ಲಿ ನೆಲೆಸಿರುವ ಬಗ್ಗೆ ಗೃಹ ಸಚಿವಾಲಯ ನಡೆಸಿದ ತನಿಖೆಯ ಸಂದರ್ಭದಲ್ಲಿ ಅವರ ಹೆಸರುಗಳು ಬೆಳಕಿಗೆ ಬಂದಿವೆ. ಈ ಇಬ್ಬರು ಮಹಿಳೆಯರನ್ನು ಭಾಗಲ್ಪುರ ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದು, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಅವರ ಹೆಸರುಗಳಲ್ಲಿ ಒಂದು ಇಮ್ರಾನಾ ಖಾನಮ್, ಅವರಿಗೆ ವಯಸ್ಸಾಗಿರುವ ಕಾರಣ  ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಆದೇಶದಂತೆ, ನಾನು ಫಾರ್ಮ್ ಅನ್ನು ಭರ್ತಿ ಮಾಡಿ ಅವರ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅವರ ಪಾಸ್‌ಪೋರ್ಟ್ 1956 ರದ್ದಾಗಿದ್ದು, ಅವರಿಗೆ 1958 ರಲ್ಲಿ ವೀಸಾ ಸಿಕ್ಕಿತ್ತು. ಅವರು ಪಾಕಿಸ್ತಾನದವರು. ತನಿಖೆಯ ಮುಂದಿನ ಹಂತವನ್ನು ಇಲಾಖೆ ನಡೆಸುತ್ತದೆ ಎಂದಿದ್ದಾರೆ.

ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಹಾರ ಮತದಾರರ ಪಟ್ಟಿಯಿಂದ ಅನರ್ಹರನ್ನು ತೆಗೆದುಹಾಕಲು ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಡಿ ಮೀರಿ ಬಂದಿದ್ದ ಪಾಕಿಸ್ತಾನದ 15 ಮೀನುಗಾರರನ್ನು ಸೆರೆಹಿಡಿದ ಬಿಎಸ್‌ಎಫ್‌