Select Your Language

Notifications

webdunia
webdunia
webdunia
webdunia

ಗಡಿ ಮೀರಿ ಬಂದಿದ್ದ ಪಾಕಿಸ್ತಾನದ 15 ಮೀನುಗಾರರನ್ನು ಸೆರೆಹಿಡಿದ ಬಿಎಸ್‌ಎಫ್‌

Border Security Force, Pakistan Fishermen, Kutch District, Gujarat

Sampriya

ಗುಜರಾತ್‌ , ಭಾನುವಾರ, 24 ಆಗಸ್ಟ್ 2025 (11:54 IST)
Photo Credit X
ಗುಜರಾತ್‌: ಗಡಿ ವ್ಯಾಪ್ತಿಯನ್ನು ಮೀರಿ ಬಂದಿದ್ದ ಪಾಕಿಸ್ತಾನದ ಮೀನುಗಾರರನ್ನು ಗುಜರಾತ್‌ನ ಕಚ್‌ ಜಿಲ್ಲೆಯ ಕರಾವಳಿ ತೀರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ಬಂಧಿಸಿದ್ದಾರೆ.

 ಗಡಿ ಭದ್ರತಾ ಪಡೆ ಅಧಿಕಾರಿಗಳು ಪಾಕಿಸ್ತಾನದ 15 ಮಂದಿ ಪಾಕ್ ಮೀನುಗಾರರನ್ನು ಬಂಧಿಸಿದ್ದು, ಅವರಿದ್ದ ಒಂದು ನಾಡದೋಣಿಯನ್ನು ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಪಾಕಿಸ್ತಾನದ ಸಿಂಧಿ ಪ್ರಾಂತ್ಯದ ಸುಜಾವಲ್ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. 

ಕಚ್ ಪ್ರದೇಶದ ಕೋರಿ ಕ್ರೀಕ್‌ನಲ್ಲಿ ಅಪರಿಚಿತ ದೋಣಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಆಧರಿಸಿ ಶನಿವಾರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ 15 ಮಂದಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಬಿಎಸ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ದೋಣಿಯಲ್ಲಿ 60 ಕೆ.ಜಿ ಮೀನು, 9 ಮೀನು ಹಿಡಿಯುವ ಬಲೆ, ಐಸ್‌ಗಡ್ಡೆ, ಆಹಾರ, ಮರದ ತುಂಡು, ₹200 ಪಾಕಿಸ್ತಾನ ಕರೆನ್ಸಿ ಮತ್ತು ಮೊಬೈಲ್‌ ಪೋನ್ ಅನ್ನು ಜಪ್ತಿ ಮಾಡಲಾಗಿದೆ ಗಡಿ ಭದ್ರತಾ ಪಡೆ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬೆಳ್ತಂಗಡಿ ಠಾಣೆಯಲ್ಲಿ ದೂತ ಸಮೀರನ ವಿಚಾರಣೆ ಇಂದು