Select Your Language

Notifications

webdunia
webdunia
webdunia
webdunia

ಚುನಾವಣಾ ಆಯೋಗಕ್ಕೆ ಮೂರು ಬಾಟಲಿ ಕಳುಹಿಸುತ್ತೇನೆ: ಅರವಿಂದ್ ಕೇಜ್ರಿವಾಲ್

Arvind Kejriwal

Krishnaveni K

ನವದೆಹಲಿ , ಗುರುವಾರ, 30 ಜನವರಿ 2025 (14:52 IST)
ನವದೆಹಲಿ: ಚುನಾವಣಾ ಆಯೋಗಕ್ಕೆ ಮೂರು ಬಾಟಲಿ ಯಮುನಾ ನದಿ ನೀರನ್ನು ನಾನೇ ಕಳುಹಿಸುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಗೆ ಹರಿದುಬರುವ ಯಮುನಾ ನದಿ ನೀರಿಗೆ ಹರ್ಯಾಣದಲ್ಲಿ ಬಿಜೆಪಿ ನಾಯಕರು ವಿಷ ಬೆರೆಸಿ ಕಳುಹಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಅಷ್ಟೇ ಅಲ್ಲ, ತಮ್ಮ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಸುಮ್ಮನೇ ದೂರು ನೀಡಿದರೆ ಸಾಲದು, ಇದಕ್ಕೆ ಪುರಾವೆ ನೀಡಬೇಕು ಎಂದಿತ್ತು. ಹೀಗಾಗಿ ಈಗ ಅರವಿಂದ್ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಮೂರು ಬಾಟಲಿ ಯಮುನಾ ನದಿ ನೀರು ಕಳುಹಿಸುವುದಾಗಿ ಹೇಳಿದ್ದಾರೆ.

ಚುನಾವಣಾ ಆಯೋಗ ಯಾವತ್ತೂ ಈ ರೀತಿ ಪಕ್ಷಪಾತಿಯಾಗಿದ್ದು ನಾನು ನೋಡಿಯೇ ಇಲ್ಲ. ನನಗೆ ಗೊತ್ತು ಅವರು ನನ್ನನ್ನು ಇನ್ನು ಎರಡು ದಿನಗಳಲ್ಲಿ ಜೈಲಿಗೆ ಕಳುಹಿಸುತ್ತಾರೆ. ಅವರು ಮಾಡಲಿ, ಅದಕ್ಕೆಲ್ಲಾ ನಾನು ಹೆದರಲ್ಲ. ನಾನು ಇದೇ ಯಮುನಾ ನದಿ ನೀರನ್ನು ಮೂರು ಬಾಟಲಿಗಳಲ್ಲಿ ಚುನಾವಣಾ ಆಯುಕ್ತರಿಗೆ ಕಳುಹಿಸಿಕೊಡುತ್ತೇನೆ. ಅದನ್ನು ಅವರು ಪತ್ರಿಕಾಗೋಷ್ಠಿಯಲ್ಲೇ ಕುಡಿಯಲಿ. ಚೆನ್ನಾಗಿದೆ ಎಂದರೆ ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ’ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ನಿಂದನೆ ಪ್ರಕರಣ: ಹೈಕೋರ್ಟ್‌ನಲ್ಲಿ ಸಿ.ಟಿ. ರವಿಗೆ ಬಿಗ್‌ ರಿಲೀಫ್‌