ನವದೆಹಲಿ: ದೆಹಲಿಯಲ್ಲಿ ಆಡಳಿತಾರೂಢ ಎಎಪಿ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೇ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ ಜೈಲಿಗೆ ಹಾಕಿದ್ರೂ ನಾವೇ ಗೆಲ್ಲೋದು ಎಂದು ಸವಾಲು ಹಾಕುವ ವಿಡಿಯೋವೊಂದು ವೈರಲ್ ಆಗಿದೆ.
ದೆಹಲಿ ಅಬಕಾರಿ ಅಕ್ರಮ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದವರು. ಹೊರಬಂದ ಬಳಿಕ ಅವರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮನ್ನು ಮೋದಿ ಮತ್ತು ಬಿಜೆಪಿ ಸರ್ಕಾರ ಸಂಚು ಮಾಡಿ ಜೈಲಿಗೆ ಹಾಕಿದೆ ಎಂದಿದ್ದರು.
ಅವರ ಸಂಚುಗಳೆಲ್ಲಾ ನಮ್ಮ ಮುಂದೆ ನಡೆಯಲ್ಲ. ನೀವು ಬೇಕಾದ್ರೆ ನೋಡ್ತಿರಿ, ನಮ್ಮನ್ನು ಜೈಲಿನಲ್ಲೇ ಕೂಡಿಟ್ಟರೂ ಅಲ್ಲಿಂದಲೇ ನಾವು ಮೋದಿಯನ್ನು ಸೋಲಿಸುತ್ತೇವೆ ಎಂದು ವ್ಯಂಗ್ಯ ಮಾಡಿದ್ದರು. ಅವರ ಈ ವಿಡಿಯೋವನ್ನು ಈಗ ವೈರಲ್ ಮಾಡಲಾಗಿದೆ.
ಅಂದು ಮೋದಿ ವಿರುದ್ಧ ಅಷ್ಟೆಲ್ಲಾ ಮಾತನಾಡಿದ್ದ ಕೇಜ್ರಿವಾಲ್ ಈಗ ತಮ್ಮ ಪಕ್ಷ ಬಿಡಿ ತಾವೇ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅವರ ಈ ವಿಡಿಯೋ ಈಗ ವೈರಲ್ ಆಗಿದೆ.