ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಹಳ ವರ್ಷಗಳ ನಂತರ ಅಧಿಕಾರಕ್ಕೇರಿದ ಬಿಜೆಪಿ ಹಲವು ಉಚಿತ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದೀಗ ದೆಹಲಿ ಜನರಿಗೆ ಏನೆಲ್ಲಾ ಫ್ರೀ ಆಗಿ ಸಿಗಲಿದೆ, ಮೋದಿ ಗ್ಯಾರಂಟಿಯಲ್ಲಿ ಏನೆಲ್ಲಾ ಇತ್ತು ಇಲ್ಲಿದೆ ವಿವರ.
70 ಸ್ಥಾನಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 48 ಸ್ಥಾನ ಗೆದ್ದುಕೊಂಡ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ. ಅದರ ಜೊತೆಗೆ ಚುನಾವಣೆ ಪೂರ್ವ ಕೊಟ್ಟ ಗ್ಯಾರಂಟಿ ಯೋಜನೆಗಳನ್ನೂ ಈಡೇರಿಸಬೇಕಿದೆ.
ಬಿಜೆಪಿ ಗ್ಯಾರಂಟಿಯಲ್ಲಿ ಏನೆಲ್ಲಾ ಇತ್ತು?
-
ಬಡ ಮಹಿಳೆಯರಿಗೆ ಮಾಸಿಕವಾಗಿ 2,500 ರೂ.
-
ಬಡ ಮಹಿಳೆಯರಿಗೆ 500 ರೂ.ಗೆ ಅಡುಗೆ ಅನಿಲ ಸಿಗಲಿದೆ.
-
ಹೋಳಿ-ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ಉಚಿತ ಸಿಲಿಂಡರ್ ವಿತರಣೆ
-
ಗರ್ಭಿಣಿಯರಿಗೆ 21 ಸಾವಿರ ರೂ. ಆರ್ಥಿಕ ನೆರವು.
-
10 ಲಕ್ಷ ರೂ.ಒಳಗಿನ ವೈದ್ಯಕೀಯ ವೆಚ್ಚ ಉಚಿತ
-
ಒಪಿಡಿ ಸೇವೆಗಳು, ಪ್ರಯೋಗಾಲಯ ಸೇವೆಗಳೂ ಉಚಿತ
-
ದೆಹಲಿಯ 1700 ಕ್ಕೂ ಹೆಚ್ಚು ಅನಧಿಕೃತ ವಸಾಹತುಗಳಲ್ಲಿ ವಾಸಿಸುವ ಜನರು ತಮ್ಮ ಮನೆಗಳ ಮಾಲಿಕತ್ವ ಹಕ್ಕು ಪಡೆದುಕೊಳ್ಳಲಿದ್ದಾರೆ.
-
ಗಿಗ್ ಕಾರ್ಮಿಕರು ಮತ್ತು ಜವಳಿ ಕಾರ್ಮಿಕರಿಗೆ ತಲಾ 10 ಲಕ್ಷ ರೂ.ಗಳ ಜೀವ ವಿಮೆ
-
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ 15 ಸಾವಿರ ಆರ್ಥಿಕ ನೆರವು.
-
ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾಸಿಕ 1000 ರೂ.ಗಳ ಸಹಾಯಧನ ಸಿಗಲಿದೆ.
ಇವಿಷ್ಟು ಘೋಷಣೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದೀಗ ಅಧಿಕಾರಕ್ಕೇರಿದ ಬೆನ್ನಲ್ಲೇ ಜನರು ಈ ಭರವಸೆಗಳನ್ನು ಈಡೇರಿಸುತ್ತಾ ಎಂದು ಕಾದು ನೋಡುತ್ತಿದ್ದಾರೆ.