ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಎಪಿ ಪಕ್ಷದ ನಾಯಕ ಅರವಿಂದ್ ದೆಹಲಿ ಗದ್ದುಗೆ ಹೋದರೂ ಸಿಎಂ ಆಗುವ ಸಾಧ್ಯತೆಯಿದೆ. ಹೇಗೆ ಅಂತೀರಾ ಇಲ್ಲಿ ನೋಡಿ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕೇವಲ 22 ಸ್ಥಾನಗಳನ್ನು ಗೆದ್ದುಕೊಂಡ ಆಡಳಿತಾರೂಢ ಆಪ್ ಅಧಿಕಾರ ಕಳೆದುಕೊಂಡಿದೆ. ದೆಹಲಿ ಅಬಕಾರಿ ಅಕ್ರಮ ಹಗರಣ ಆರೋಪದಲ್ಲಿ ಜೈಲಿನಲ್ಲಿದ್ದರೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡದ ಅರವಿಂದ್ ಕೇಜ್ರಿವಾಲ್ ಬೇಲ್ ಮೇಲೆ ಹೊರಗೆ ಬಂದ ಮೇಲೆ ರಾಜೀನಾಮೆ ಕೊಟ್ಟು ತಮ್ಮ ಆಪ್ತೆ ಅತಿಶಿ ಕೈಗೆ ಅಧಿಕಾರ ಕೊಟ್ಟಿದ್ದರು.
ಈ ಬಾರಿ ಚುನಾವಣೆಯಲ್ಲಿ ಗೆದ್ದು ಮತ್ತೆ ದೆಹಲಿ ಸಿಎಂ ಆಗುವ ಕನಸು ಹೊತ್ತಿದ್ದರು. ಆದರೆ ಆಪ್ ಪಕ್ಷ ಮಾತ್ರವಲ್ಲ ಸ್ವತಃ ಕೇಜ್ರಿವಾಲ್ ಸೋತು ಸುಣ್ಣವಾಗಿದ್ದಾರೆ. ಹೀಗಾಗಿ ಈಗ ಕೇಜ್ರಿವಾಲ್ ಸಿಎಂ ಕನಸು ನುಚ್ಚು ನೂರಾಗಿದೆ.
ಹೀಗಾಗಿ ಈಗ ಪಂಜಾಬ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕೇಜ್ರಿವಾಲ್ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆಪ್ ಪಕ್ಷದ ಪರಮೋಚ್ಛ ನಾಯಕ ಕೇಜ್ರಿವಾಲ್. ಅವರ ಪಕ್ಷವೇ ಪಂಜಾಬ್ ನಲ್ಲಿ ಅಧಿಕಾರದಲ್ಲಿದೆ.
ಹೀಗಾಗಿ ಈಗ ತಮ್ಮ ಗುರು ಕೇಜ್ರಿವಾಲ್ ಗಾಗಿ ಪಂಜಾಬ್ ನ ಹಾಲಿ ಸಿಎಂ ಭಗವಂತ್ ಮಾನ್ ಸಿಂಗ್ ಅಧಿಕಾರ ಬಿಟ್ಟುಕೊಡಬಹುದು ಎಂಬ ಸುದ್ದಿ ಹಬ್ಬಿದೆ. ದೆಹಲಿ ಹೋದರೆ ಪಂಜಾಬ್ ನಲ್ಲಾದರೂ ಮತ್ತೆ ಮುಖ್ಯಮಂತ್ರಿಯಾಗುವ ಹವಣಿಕೆಯಲ್ಲಿ ಕೇಜ್ರಿವಾಲ್ ಇದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಪಂಜಾಬ್ ನ ಆಪ್ ನಾಯಕರ ಅಭಿಪ್ರಾಯ ಮುಖ್ಯವಾಗುತ್ತದೆ.