Select Your Language

Notifications

webdunia
webdunia
webdunia
webdunia

ರಾಜಕೀಯ ನಾಯಕರ ಮಿಮಿಕ್ರಿ ಮಾಡಿ ಅರೆಸ್ಟ್ ಆದ ವ್ಯಾಪಾರಿ

ರಾಜಕೀಯ ನಾಯಕರ ಮಿಮಿಕ್ರಿ ಮಾಡಿ ಅರೆಸ್ಟ್ ಆದ ವ್ಯಾಪಾರಿ
ಗಾಂಧಿನಗರ , ಭಾನುವಾರ, 2 ಜೂನ್ 2019 (11:32 IST)
ಗಾಂಧಿನಗರ : ರಾಜಕೀಯ ನಾಯಕರ ಮಾತಿನಂತೆ  ಮಿಮಿಕ್ರಿ  ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ರೈಲ್ವೇ ಭದ್ರತಾ ಸಿಬ್ಬಂದಿ (ಆರ್ ಪಿಎಫ್) ಅರೆಸ್ಟ್ ಮಾಡಿದ್ದಾರೆ.




ಅದ್ವೇಶ್ ದುಬೆ ಬಂಧಿತ ವ್ಯಾಪಾರಿ. ಈತ ಗೊಂಬೆ, ಆಟಿಕೆ ವಸ್ತುಗಳನ್ನು  ಹಾಗೂ ವೆನಿಟಿ ಬ್ಯಾಗ್ಗಳನ್ನು ರೈಲಿನಲ್ಲಿ ವ್ಯಾಪಾರ ಮಾಡುತ್ತಿದ್ದ. ಈತ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಧಾನಿ ಮೋದಿ, ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ನಾಯಕರ ಮಿಮಿಕ್ರಿ ಮಾಡುತ್ತಿದ್ದ.


ಪ್ರಯಾಣಿಕರೊಬ್ಬರು ಅದ್ವೇಶ್ ದುಬೆ ಮಿಮಿಕ್ರಿ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು  ಈಗ ವೈರಲ್ ಆಗಿದ್ದು, ರೈಲ್ವೇ ಪೊಲೀಸರ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಆತನನ್ನು ಗುಜರಾತ್‍ನ ಸೂರತ್ ರೈಲು ನಿಲ್ದಾಣದಲ್ಲಿ ಆರ್ ಪಿಎಫ್ ಪೊಲೀಸರು ಬಂಧಿಸಿದ್ದಾರೆ.


ಅದ್ವೇಶ್ ದುಬೆ ವಿರುದ್ಧ ರೈಲ್ವೇ ಕಾಯ್ದೆ ಸೆಕ್ಷನ್ 44 (ಭಿಕ್ಷಾಟನೆ ನಿಷೇಧ), 145 ಬಿ (ಪ್ರಯಾಣಿಕರಿಗೆ ಕಿರುಕುಳ ಅಥವಾ ನಿಷೇಧಿತ ಭಾಷೆ ಬಳಕೆ) ಹಾಗೂ 147 (ಪರವಾನಿಗೆ ರಹಿತ ವ್ಯಾಪಾರ)ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ 10 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್