Select Your Language

Notifications

webdunia
webdunia
webdunia
webdunia

ಮದುವೆಯಾಗದಿದ್ದರೆ ಮುಖಕ್ಕೆ ಆ್ಯಸಿಡ್ ಎರಚುವೆ ಎಂದ ಪಾಗಲ್ ಪ್ರೇಮಿ ಅರೆಸ್ಟ್

ಮದುವೆಯಾಗದಿದ್ದರೆ ಮುಖಕ್ಕೆ ಆ್ಯಸಿಡ್ ಎರಚುವೆ ಎಂದ ಪಾಗಲ್ ಪ್ರೇಮಿ ಅರೆಸ್ಟ್
ಬೆಂಗಳೂರು , ಗುರುವಾರ, 30 ಮೇ 2019 (07:09 IST)
ಬೆಂಗಳೂರು : ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಮದುವೆಯಾಗದಿದ್ದರೆ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.



ಫೈಸಲ್ ಬೆದರಿಕೆ ಹಾಕಿದ ಪಾಗಲ್ ಪ್ರೇಮಿ. ಯುವತಿಯು ಬಿ.ಫಾರ್ಮ್ ವ್ಯಾಸಂಗ ಮಾಡುತ್ತಿದ್ದು, ತಾಯಿ ಹಾಗೂ ಸಹೋದರನ ಜೊತೆ ಜೆ.ಜೆ.ನಗರದಲ್ಲಿ ವಾಸುತ್ತಿದ್ದಾಳೆ. ಯುವತಿಯ ಸಂಬಂಧಿಕನಾದ ಫೈಸಲ್ ಆಕೆಯ ಬಳಿ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತದ್ದ. ಆದರೆ ಮಾದಕ ವ್ಯಸನಿ ಆಗಿರುವ ಫೈಸಲ್‍ ನನ್ನು ಮದುವೆಯಾಗಲು ಯುವತಿ ನಿರಾಕರಿಸಿದ್ದಳು.

 

ಇದರಿಂದ ಕೋಪಗೊಂಡ ಆತ ಯಾರು ಇಲ್ಲದ ವೇಳೆ ಆಕೆಯ ಮನೆಗೆ ನುಗ್ಗಿ ಮನೆ ಹಾಗೂ ವಾಹನದ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದ.ಅಷ್ಟೇ ಅಲ್ಲದೇ ಮದುವೆಯಾಗದಿದ್ದರೆ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಯುವತಿ ಆತನ ವಿರುದ್ಧ ಜೆ.ಜೆ ನಗರ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾಗಲ್ ಪ್ರೇಮಿ ಫೈಸಲ್‍ ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಟಿಕ್ ಟಾಕ್ ನಲ್ಲಿ ಹಾವಿನ ಜೊತೆ ಸರಸವಾಡಿದ ಇಬ್ಬರು ಯುವಕರು ಅರೆಸ್ಟ್