Select Your Language

Notifications

webdunia
webdunia
webdunia
webdunia

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ
ಬೆಂಗಳೂರು , ಬುಧವಾರ, 29 ಮೇ 2019 (12:05 IST)
ಬೆಂಗಳೂರು : ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ  ಸಂಭವಿಸಿದೆ.




ಕೆಐಎಎಲ್‍ನ ಟರ್ಮಿನಲ್ ಮುಂಭಾಗದ ಬುರಿಟೋ ಬಾಯ್ಸ್ ಎನ್ನುವ ಹೆಸರಿನ ಪಿಜ್ಜಾ-ಕೆಫೆ ಶಾಪ್‍ನ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಇಡೀ ಶಾಪ್ ಬೆಂಕಿಗೆ ಅಹುತಿಯಾಗಿದೆ. ವಿಮಾನ ನಿಲ್ದಾಣದ ತುಂಬಾ ದಟ್ಟ ಹೊಗೆ ಬೆಂಕಿ ಆವರಿಸಿರುವುದನ್ನು  ಕಂಡ ಪ್ರಯಾಣಿಕರು, ಸ್ಥಳೀಯರು ಕ್ಷಣ ಕಾಲ ಆತಂಕಕ್ಕೀಡಾಗಿದ್ದರು.


ತಕ್ಷಣ ಕೆಐಎಎಲ್ ನ ಆಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನ ನಂದಿಸುವ, ಕಾರ್ಯಕೈಗೊಂಡು  ಯಶಸ್ವಿಯಾಗಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‍ ನಿಂದ ಅಗ್ನಿ ಅವಘಢ  ನಡೆದಿರಬಹದು ಎಂದು ಊಹಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೋಕ್‌ ಪಾಲ್ ಸಂಸ್ಥೆಯಿಂದ ಜನತೆಗೆ 25 ಸಾವಿರ ರೂ ಗೆಲ್ಲುವ ಅವಕಾಶ