Select Your Language

Notifications

webdunia
webdunia
webdunia
webdunia

ಬೆಲೆ ಏರಿಕೆಯಿಂದ ತತ್ತರಿಸಿದ ಜನ ಸಾಮಾನ್ಯರಿಗೆ ಮತ್ತೊಂದು ಬರೆ, ಎಲ್‌ಪಿಜಿ ದರವನ್ನು ಹೆಚ್ಚಿಸಿದ ಕೇಂದ್ರ

LPG cylinders

Sampriya

ನವದೆಹಲಿ , ಸೋಮವಾರ, 7 ಏಪ್ರಿಲ್ 2025 (17:24 IST)
Photo Courtesy X
sನವದೆಹಲಿ: ಈಗಾಗಲೇ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ಿದೀಗಹ ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ₹50 ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ.

ಉಜ್ವಲ ಮತ್ತು ಉಜ್ವಲೇತರ ಎಲ್‌ಪಿಜಿ ಸಿಲಿಂಡರ್‌ಗಳು ಮಂಗಳವಾರದಿಂದ ₹50ರಷ್ಟು ಏರಿಕೆಯಾಗಲಿದೆ ಎಂದು ಸಚಿವ ಹರ್‌ದೀಪ್ ಪುರಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹50 ಗಳಷ್ಟು ಹೆಚ್ಚಾಗಲಿದೆ. ₹500 ಗಳಿಂದ ₹550ಗಳಿಗೆ (ಪಿಎಂಯುವೈ ಫಲಾನುಭವಿಗಳಿಗೆ) ಮತ್ತು ಇತರರಿಗೆ ಇದು ₹803 ಗಳಿಂದ ₹853ಗಳಿಗೆ ಏರಿಕೆಯಾಗಲಿದೆ ಎಂದು ಸಚಿವರು ಹೇಳಿದರು.

"ನಾವು ಮುಂದುವರೆದಂತೆ ಪರಿಶೀಲಿಸುವ ಒಂದು ಹಂತ ಇದು. ನಾವು ಪ್ರತಿ 2-3 ವಾರಗಳಿಗೊಮ್ಮೆ ಇವುಗಳನ್ನು ಪರಿಶೀಲಿಸುತ್ತೇವೆ" ಎಂದು ಅವರು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕಗಳನ್ನು ವಿಧಿಸುವುದರಿಂದ ತೈಲ ಮಾರುಕಟ್ಟೆ ಕಂಪನಿಗಳು ಹಿಂದೆ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಆವೆಲ್ಲ ವಿಚಾರ ಕೇಳ್ಬೇಡಿ: ಕಿಡ್ನ್ಯಾಪ್ ಪ್ರಕರಣದ ಬಗ್ಗೆ ಕೇಳಿದ್ದೆ ತಡ ಭವಾನಿ ರೇವಣ್ಣ ಮುಖದ ನಗುವೇ ಮಾಯ