Select Your Language

Notifications

webdunia
webdunia
webdunia
webdunia

ಮೊಬೈಲ್‌ನಲ್ಲಿ ಸಿನೆಮಾ ನೋಡುತ್ತಿದ್ದ ಪತ್ನಿಯನ್ನು ಹತ್ಯೆಗೈದ ಪತಿ

ಮೊಬೈಲ್‌ನಲ್ಲಿ ಸಿನೆಮಾ ನೋಡುತ್ತಿದ್ದ ಪತ್ನಿಯನ್ನು ಹತ್ಯೆಗೈದ ಪತಿ
ಮುಂಬೈ , ಗುರುವಾರ, 11 ಏಪ್ರಿಲ್ 2019 (13:08 IST)
ಮೊಬೈಲ್‌ನಲ್ಲಿ ನಿರಂತರವಾಗಿ ಸಿನೆಮಾ ನೋಡುತ್ತಿದ್ದ ಪತ್ನಿ ವಿರುದ್ಧ ಆಕ್ರೋಶಗೊಂಡ ಪತಿ ಆಕೆಯನ್ನು ಹತ್ಯೆಗೈದ ಘಟನೆ ವರದಿಯಾಗಿದೆ.
ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 32 ವರ್ಷ ವಯಸ್ಸಿನ ಆರೋಪಿ ಚೇತನ್ ಚೌಗುಲೆ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದ. ಪತ್ನಿ ಮೊಬೈಲ್‌ನಲ್ಲಿ ನಿರಂತರವಾಗಿ ಸಿನೆಮಾ ನೋಡುತ್ತಿರುವುದರಿಂದ ರೋಸಿ ಹೋಗಿದ್ದ ಎನ್ನಲಾಗಿದೆ.
 
ಹಲವಾರು ಬಾರಿ ರಾತ್ರಿಪೂರ್ತಿ ಸಿನೆಮಾ ನೋಡುವುದು ಸರಿಯಲ್ಲ ಎಂದು ಪತ್ನಿಗೆ ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಕೆಲವು ಬಾರಿ ಜಗಳವಾಡಿ ಮಗುವನ್ನು ಕರೆದುಕೊಂಡು ತನ್ನ ತಂದೆತಾಯಿ ಮನೆಗೆ ಹೋಗುತ್ತಿದ್ದಳು ಎಂದು ಆರೋಪಿ ಚೌಗಲೆ ತಿಳಿಸಿದ್ದಾನೆ.
 
ನಿನ್ನೆ ರಾತ್ರಿ ಕೂಡಾ ಪತ್ನಿ ಸಿನೆಮಾ ನೋಡುತ್ತಿರುವಾಗ ಶಬ್ದದಿಂದ ನಿದ್ದೆ ಬರುತ್ತಿಲ್ಲ. ಸಿನೆಮಾ ನೋಡುವುದು ಬಿಟ್ಟು ಮಲಗು ಎಂದು ಹೇಳಿದ್ದೆ. ಆದರೂ ಕೇಳಲಿಲ್ಲ. ನಾನು ಹಾಗೇ ನಿದ್ದೆಗೆ ಜಾರಿದೆ. ಬೆಳಗಿನ ಜಾವ ಎದ್ದಾಗಲೂ ಪತ್ನಿ ಸಿನೆಮಾ ನೋಡುತ್ತಿರುವುದು ಕಂಡು ಕೋಪ ತಡೆಯಲಾಗಲಿಲ್ಲ. ಕೋಪದ ಭರದಲ್ಲಿ ನೈಲಾನ್ ಹಗ್ಗದಿಂದ ಆಕೆಯ ಕೊರಳಿಗೆ ಬಿಗಿದಾಗ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ವಾಸ್ತವದ ಅರಿವಾದ ನಂತರ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ಆರೋಪಿಯ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇವಿಎಂ ಯಂತ್ರದಲ್ಲಿ ದೋಷ; ಯಂತ್ರವನ್ನು ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದ ಜನಸೇನಾ ನಾಯಕ