Publish Date: Thu, 11 Apr 2019 (11:37 IST)
Updated Date: Thu, 11 Apr 2019 (11:39 IST)
ಅಮರಾವತಿ : 2019 ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ 18 ರಾಜ್ಯ 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರದ ವ್ಯಾಪ್ತಿಯಲ್ಲಿ ಆರಂಭವಾಗಿದೆ.
ಆದರೆ ಇವಿಎಂ ದೋಷವಿದ್ದ ಹಿನ್ನೆಲೆಯಲ್ಲಿ ಗೂಟಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜನಸೇನಾ ನಾಯಕ ಮಧುಸುಧನ್ ಗುಪ್ತಾ ಎಂಬುವವರು ಮತದಾನ ಮಾಡಲು ಬಂದಾಗ ಇವಿಎಂ ಯಂತ್ರ ಕೆಲಸ ಮಾಡಲಿಲ್ಲ ಎಂದು ಕೋಪಗೊಂಡು ಇವಿಎಂ ಯಂತ್ರವನ್ನು ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ
ಇವಿಎಂ ದೋಷದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಕುಪ್ಪಂ ಕ್ಷೇತ್ರದ ರಾಮಕುಪ್ಪಂ ಗುಡಿಪಲ್ಲಿ ಸೇರಿ 30 ಕಡೆ ಮತದಾನ ವಿಳಂಬವಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.