Select Your Language

Notifications

webdunia
webdunia
webdunia
webdunia

ಮಂಡ್ಯದ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ವಜಾ ಮಾಡಿದ ಕೆಪಿಸಿಸಿ

ಮಂಡ್ಯದ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ವಜಾ ಮಾಡಿದ ಕೆಪಿಸಿಸಿ
ಮಂಡ್ಯ , ಗುರುವಾರ, 11 ಏಪ್ರಿಲ್ 2019 (09:33 IST)
ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕ್ಷಣ ಕ್ಷಣಕ್ಕೆ ಕುತೂಹಲ ಮೂಡಿಸುತ್ತಿದ್ದು, ಇದೀಗ ಮಂಡ್ಯದ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ಕೆಪಿಸಿಸಿ ವಜಾ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.

 ಮಂಡ್ಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಗೆ ಬೆಂಬಲ ಸೂಚಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ವಜಾ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಂಡ್ಯ ಗ್ರಾಮಾಂತರದ ಹೆಚ್. ಅಪ್ಪಾಜಿ, ಭಾರತಿ ನಗರದ ಎಎಸ್ ರಾಜೀವ್, ಮಳವಳ್ಳಿಯ ಪುಟ್ಟರಾಮು, ಮಳವಳ್ಳಿ ನಗರದ ಕೆಜೆ ದೇವರಾಜು, ನಾಗಮಂಗಲದ ಎಂ ಪ್ರಸನ್ನ, ಕೆಆರ್ ಪೇಟೆಯ ಕೆಆರ್ ರವೀಂದ್ರ ಬಾಬು, ಮೇಲುಕೋಟೆಯ ಎಸ್‍.ಬಿ ಪ್ರಕಾಶ್ ಅವರನ್ನು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ. ವೈ. ಘೋರ್ಪಡೆ ಅವರು ವಜಾಗೊಳಿಸಿ ಆದೇಶ ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ವಿಕಲಚೇತನ ಹೆಣ್ಣು ಮಗಳನ್ನು ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿ ಸಾಧನೆ- ಸುಮಲತಾ ವಿರುದ್ಧ ಕಿಡಿಕಾರಿದ ಸಿಎಂ