Select Your Language

Notifications

webdunia
webdunia
webdunia
webdunia

ಜಾತಿ ರಾಜಕಾರಣದ ವಿಷ ಹರಡಿ ಶಾಂತಿ ಕದಡಲು ಪ್ರಯತ್ನ: ಮೋದಿ ಹೀಗೆ ಹೇಳಿದ್ದು ಯಾರಿಗೆ

ಜಾತಿ ರಾಜಕಾರಣದ ವಿಷ ಹರಡಿ ಶಾಂತಿ ಕದಡಲು ಪ್ರಯತ್ನ: ಮೋದಿ ಹೀಗೆ ಹೇಳಿದ್ದು ಯಾರಿಗೆ

Sampriya

ನವದೆಹಲಿ , ಶನಿವಾರ, 4 ಜನವರಿ 2025 (14:46 IST)
ನವದೆಹಲಿ: ಜಾತಿ ರಾಜಕಾರಣದ ವಿಷವನ್ನು ಹರಡುವ ಮೂಲಕ ಕೆಲವರು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇಂದು ದೆಹಲಿಯಲ್ಲಿ ಗ್ರಾಮೀಣ ಭಾರತ ಮಹೋತ್ಸವವನ್ನು ಉದ್ಘಾಟಿಸಿದ ಅವರು, ಜಾತಿ ರಾಜಕಾರಣ ಹೆಸರಿನಲ್ಲಿ ಕೆಲವರು ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಆದರೆ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧವೇ ಅವರು ವಾಗ್ದಾಳಿ ನಡೆಸಿದರು.

 2047 ರ ವೇಳೆಗೆ ವಿಕಸಿತ ಭಾರತ ಕನಸನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಗ್ರಾಮಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಸಿಕ್ಕಿದ ದಶಕಗಳ ನಂತರವೂ ಗ್ರಾಮೀಣ ಭಾರತವನ್ನು ನಿರ್ಲಕ್ಷಿಸಿಕೊಂಡು ಬರಲಾಗುತ್ತಿತ್ತು. ಮೂಲಭೂತ ಅವಶ್ಯಕತೆಗಳಿಂದ ವಂಚಿತವಾಗಿರುವ ಗ್ರಾಮಗಳನ್ನು ಬಿಟ್ಟುಹೋದ ಹಿಂದಿನ ಸರ್ಕಾರಕ್ಕಿಂತ ಭಿನ್ನವಾಗಿ ಇಂದಿನ ನಮ್ಮ ಸರ್ಕಾರವು ಈಗ ಹಳ್ಳಿಗಳನ್ನು ಸಬಲೀಕರಣಗೊಳಿಸಲು ಮತ್ತು ಆರಂಭದಲ್ಲಿ ಕಡೆಗಣಿಸಲ್ಪಟ್ಟವರ ಅಗತ್ಯಗಳನ್ನು ಪರಿಹರಿಸಲು ಗಮನಹರಿಸಿದೆ ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಪಿಎಂ ಮುದ್ರಾ ಮತ್ತು ಪಿಎಂ ಸ್ವನಿಧಿ ಸೇರಿದಂತೆ 16 ಸರ್ಕಾರಿ ಯೋಜನೆಗಳಿಗೆ ಬ್ಯಾಂಕ್‌ಗಳು ಸ್ಯಾಚುರೇಶನ್ ಅಭಿಯಾನವನ್ನು ಕೈಗೊಂಡಿವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಲ್ಮೆಟ್, ಮುಖವಾಡ ಧರಿಸಿ ಮಣಪ್ಪುರಂ ಶಾಖೆಯಿಂದ ಹಾಡಹಗಲೇ 30 ಕೆ.ಜಿ ಚಿನ್ನ ದೋಚಿದ ಕಿರಾತಕರು