Publish Date: Tue, 30 Jul 2024 (19:30 IST)
Updated Date: Tue, 30 Jul 2024 (19:34 IST)
ಬೆಂಗಳೂರು: ಲೋಸಕಭಾ ಕಲಾಪದಲ್ಲಿದ್ದು ವಿಪಕ್ಷ ನಾಯಕ ರಾಹಲ್ ಗಾಂಧಿ ಅವರು ಮಾತನಾಡುತ್ತಿದ್ದಾಗ ಉಡಾಫೆ ನಗು ಬೀರಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಅಗ್ರಹಿಸಿದೆ.
ಇಂದು ಲೋಕಸಭಾ ಕಲಾಪದಲ್ಲಿ ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿ ಅವರು ಹಲ್ವಾ ಕಾರ್ಯಕ್ರಮದ ಫೋಟೋ ಪ್ರದರ್ಶನ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ತಲೆಗೆ ಕೈಯನ್ನು ಹಿಡಿದು ನಗು ಬೀರಿದ್ದಾರೆ.
ಇದಕ್ಕೆ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಈ ಮೂಲಕ ಎಸ್‌ಸಿ, ಎಸ್‌ಟಿ, ಒಬಿಸಿ ಬಗ್ಗೆ ಬಿಜೆಪಿಯ ಮನಸ್ಥಿತಿ ಅನಾವರಣವಾಗಿದೆ ಎಂದು ಹೇಳಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಕಾಂಗ್ರೆಸ್ ಪಕ್ಷ ನಿರ್ಮಲಾ ಸೀತಾರಾಮನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.
ನಿರ್ಮಲಾ ಸೀತಾರಾಮನ್ ಕ್ಷಮೆ ಕೇಳಲೇಬೇಕು!
ಎಸ್‌ಸಿ-ಎಸ್‌ಟಿ-ಒಬಿಸಿ ಮೀಸಲಾತಿ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾತನಾಡುತ್ತಿದ್ದಾಗ ನಿರ್ಮಲಾ ಸೀತಾರಾಮನ್ ಉಡಾಫೆಯ ನಗು.
ಇದು ಎಸ್‌ಸಿ - ಎಸ್‌ಟಿ - ಒಬಿಸಿ ಬಗ್ಗೆ ಬಿಜೆಪಿಯ ಮನಸ್ಥಿತಿಯ ಅನಾವರಣ!ರಣ!