ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಕಾರನ್ನು ನಿಲ್ಲಿಸಿ ಅಲ್ಲೇ ಇದ್ದ ಚಮ್ಮಾರರ ಕುಟುಂಬವನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಅವರು ಚಮ್ಮಾರನ ಜತೆ ಕುಳಿತು ಮಾತನಾಡುತ್ತಿರುವ ಫೋಟೋ ವೈರಲ್ ಆಗಿದೆ.
 
									
			
			 
 			
 
 			
					
			        							
								
																	ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಚಮ್ಮಾರ ರಾಮ್ ಚೈತ್ ಅವರೊಂದಿಗೆ ಕಾಂಗ್ರೆಸ್ ನಾಯಕ ಮಾತುಕತೆ ನಡೆಸಿದರು. ಈ ವೇಳೆ  ಅವರು ರಾಯ್ ಬರೇಲಿ ಸಂಸದರಿಗೆ ಅವರ "ಆರ್ಥಿಕವಾಗಿ ದುರ್ಬಲ" ಸ್ಥಿತಿಯನ್ನು ತಿಳಿಸಿ  ಸಹಾಯವನ್ನು  ಮಾಡುವಂತೆ ಕೋರಿದರು. ಅದಲ್ಲದೆ ರಾಹುಲ್ ಗಾಂಧಿ ಅವರು ಚಮ್ಮಾರನ ಬಳಿ ಚಪ್ಪಲಿ ಹೊಲಿಯುವ ಬಗ್ಗೆ ತಿಳಿದುಕೊಂಡರು.
									
										
								
																	ಈ ಶ್ರಮಜೀವಿಗಳ ಹಕ್ಕುಗಳಿಗಾಗಿ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ, ಬೀದಿಗಳಿಂದ ಸಂಸತ್ತಿನವರೆಗೆ ಧ್ವನಿ ಎತ್ತುತ್ತಿದ್ದೇವೆ. ಅವರ ವರ್ತಮಾನವನ್ನು ಸುರಕ್ಷಿತವಾಗಿರಿಸುವುದು ಮತ್ತು ಅವರ ಭವಿಷ್ಯವನ್ನು ಸಮೃದ್ಧಗೊಳಿಸುವುದು ನಮ್ಮ ಗುರಿಯಾಗಿದೆ" ಎಂದು ಕಾಂಗ್ರೆಸ್ X ನಲ್ಲಿ ಪೋಸ್ಟ್‌ನಲ್ಲಿ ಬರೆದಿದೆ.
									
											
									
			        							
								
																	ಸುದ್ದಿ ಸಂಸ್ಥೆ ಎಎನ್‌ಐಯೊಂದಿಗೆ ಮಾತನಾಡಿದ ರಾಮ್ ಚೈತ್, "ನಾನು ಆರ್ಥಿಕವಾಗಿ ದುರ್ಬಲನಾಗಿದ್ದೇನೆ ಎಂದು ಹೇಳಿದ್ದೇನೆ ಮತ್ತು ಸಹಾಯಕ್ಕಾಗಿ ಕೇಳಿದೆ. ನಾನು ಶೂಗಳನ್ನು ಹೇಗೆ ಸರಿಪಡಿಸುತ್ತೇನೆ ಎಂದು ತೋರಿಸಿದೆ" ಎಂದು ಹೇಳಿದರು.
									
			                     
							
							
			        							
								
																	ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸುಲ್ತಾನ್‌ಪುರ ಸಂಸದ/ಶಾಸಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜುಲೈ 2 ರಂದು ನ್ಯಾಯಾಲಯವು ರಾಹುಲ್ ಗಾಂಧಿಯನ್ನು ಜುಲೈ 26 ರಂದು ಹಾಜರಾಗುವಂತೆ ತಿಳಿಸಿತ್ತು.
									
			                     
							
							
			        							
								
																	ರಾಹುಲ್ ಗಾಂಧಿಯವರ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿದೆ ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಗಾಗಿ ಪ್ರಕರಣದ ಮುಂದಿನ ದಿನಾಂಕವನ್ನು ಆಗಸ್ಟ್ 12 ರಂದು ನಿಗದಿಪಡಿಸಲಾಗಿದೆ ಎಂದು ರಾಹುಲ್ ಗಾಂಧಿ ಅವರ ವಕೀಲ ಕಾಶಿ ಪ್ರಸಾದ್ ಶುಕ್ಲಾ TOI ಗೆ ತಿಳಿಸಿದ್ದಾರೆ.