Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ಸರ್ಕಾರಿ ಬಂಗಲೆ ಪ್ರವೇಶಿಸಲಿರುವ ರಾಹುಲ್‌ ಗಾಂಧಿ

Opposition Leader Rahul Gandhi

Sampriya

ನವದೆಹಲಿ , ಶುಕ್ರವಾರ, 26 ಜುಲೈ 2024 (18:00 IST)
ನವದೆಹಲಿ:  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸುನೆಹ್ರಿ ಬಾಗ್ ರಸ್ತೆಯ ನಂ 5 ಸರ್ಕಾರಿ ಬಂಗಲೆಯನ್ನು ನೀಡುವುದಾಗಿ ಪ್ರಸ್ತಾಪ ಸಲ್ಲಿಸಿದೆ.

ಈ ಮೂಲಕ ಶೀಘ್ರದಲ್ಲೇ ರಾಹುಲ್ ಗಾಂಧಿ ಅವರು  ತಮ್ಮ ವಾಸಕ್ಕಾಗು ಹೊಸ ಸರ್ಕಾರಿ ಬಂಗಲೆಗೆ ಪ್ರವೇಶಪಡೆಯಲಿದ್ದಾರೆ.

ಅನ್ನು ನೀಡುವ ಮೂಲಕ ಸದನ ಸಮಿತಿಯೊಂದಿಗೆ ಹೊಸ ನಿವಾಸವನ್ನು ಪಡೆಯಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ಅವರಿಗೆ ಬಂಗಲೆಯನ್ನು ನೀಡಲಾಗಿದ್ದು, ಅವರ ಕಡೆಯಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸಂಸದೀಯ ಮೂಲಗಳು ತಿಳಿಸಿವೆ.

ರಾಹುಲ್ ಅವರು ಸಂಸದರಾದಾಗಿನಿಂದ ಅವರ ನಿವಾಸ 12, ತುಘಲಕ್ ಲೇನ್ ಆಗಿತ್ತು. ಆದರೆ, ಕಳೆದ ವರ್ಷ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭೆಯಿಂದ ಅನರ್ಹಗೊಂಡ ನಂತರ ಅವರು ಆ ಮನೆಯನ್ನು ಖಾಲಿ ಮಾಡಿದ್ದರು.

ನಂತರ ಗಾಂಧಿಯವರು ತಮ್ಮ ತಾಯಿ ಸೋನಿಯಾ ಗಾಂಧಿಯವರ 10, ಜನಪಥ್ ನಿವಾಸಕ್ಕೆ ತೆರಳಿದರು. ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗುವುದರೊಂದಿಗೆ, ಅವರು ಕ್ಯಾಬಿನೆಟ್ ಮಂತ್ರಿ ಹುದ್ದೆಯನ್ನು ಹೊಂದಿರುವುದರಿಂದ ಅವರು ಟೈಪ್ 8 ಬಂಗಲೆಗೆ ಅರ್ಹರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಕ್ಷುಲ್ಲಕ ರಾಜಕಾರಣ ಮಾಡಿ ಸುಳ್ಳು ಹಬ್ಬಿಸುತ್ತಿದ್ದಾರೆ: ಖರ್ಗೆ ಆಕ್ರೋಶ