Select Your Language

Notifications

webdunia
webdunia
webdunia
webdunia

ಪೆಟ್ರೋಲ್, ಡಿಸೇಲ್ ಗೆ ಪರ್ಯಾಯ ತೈಲ- ಸಚಿವ ನಿತಿನ್ ಗಡ್ಕರಿ

ಪೆಟ್ರೋಲ್, ಡಿಸೇಲ್ ಗೆ ಪರ್ಯಾಯ ತೈಲ- ಸಚಿವ ನಿತಿನ್ ಗಡ್ಕರಿ
ಪುಣೆ , ಶನಿವಾರ, 2 ಜೂನ್ 2018 (13:57 IST)
ಪುಣೆ : ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ ತೈಲ ದರ ಏರಿಕೆಯ ಕುರಿತಾಗಿ ಶಾಶ್ವತ ಪರಿಹಾರಕ್ಕಾಗಿ ಪೆಟ್ರೋಲ್, ಡಿಸೇಲ್ ಗೆ ಪರ್ಯಾಯವಾಗಿ ತೈಲವನ್ನು ಕಂಡುಕೊಳ್ಳಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.


ಇತ್ತಿಚೆಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದ ನಂತರ ಇದೀಗ ಮತ್ತೆ  ಇಳಿಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಪುಣೆಯಲ್ಲಿ ಮಾತನಾಡಿದ ಗಡ್ಕರಿ ಅವರು, ಪರ್ಯಾಯ ತೈಲದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ನಾವು ಪೆಟ್ರೋಲ್ ಡಿಸೇಲ್ ಮೇಲೆ ಸಬ್ಸಿಡಿ ನೀಡುತ್ತಿಲ್ಲ. ಬದಲಾಗಿ ಅಡುಗೆ ಅನಿಲ ಸಂಪರ್ಕವನ್ನು 8 ಕೋಟಿ ಜನರಿಗೆ ಒದಗಿಸುತ್ತೇವೆ ಎಂದು ಹೇಳಿದ್ದಾರೆ.


ಹಾಗೇ ‘ದೇಶದ ತೈಲ ಪೂರೈಕೆಗೆ ಪರ್ಯಾಯವಾಗಿ ಇಥನಾಲ್ಮ ಮೆಥುನಾಲ್, ಬಯೋಡಿಸೇಲ್, ಬಯೋಸಿಎನ್ ಜಿ ಹಾಗೂ ವಿದ್ಯುತ್ ಅನ್ನು ಬಳಸಿಕೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ ‘ಎಂದು ಕೂಡ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಬಗ್ಗೆ ವೇಣುಗೋಪಾಲ್ ಬಳಿ ಅಸಮಾಧಾನ ತೋಡಿಕೊಂಡ ಮಲ್ಲಿಕಾರ್ಜುನ ಖರ್ಗೆ