Select Your Language

Notifications

webdunia
webdunia
webdunia
webdunia

ಕಾಳಧನದ ಕುರಿತು ಮಾಹಿತಿ ನೀಡಿ; ಕೇಂದ್ರ ಸರ್ಕಾರದಿಂದ ಬಹುಮಾನ ಗೆಲ್ಲಿ

ಕಾಳಧನದ ಕುರಿತು ಮಾಹಿತಿ ನೀಡಿ; ಕೇಂದ್ರ ಸರ್ಕಾರದಿಂದ ಬಹುಮಾನ ಗೆಲ್ಲಿ
ನವದಿಲ್ಲಿ , ಶನಿವಾರ, 2 ಜೂನ್ 2018 (08:04 IST)
ನವದಿಲ್ಲಿ : ಕಾಳಧನದ ಬಗ್ಗೆ ಮಾಹಿತಿ ನೀಡಿದವರಿಗೆ ಕೇಂದ್ರ ಸರಕಾರವು ದೊಡ್ಡ ಮೊತ್ತದ ಬಹುಮಾನವನ್ನು ಘೋಷಣೆ ಮಾಡಿದೆ.
ಈ ಪ್ರಕಾರ ಭಾರತದೊಳಗೆ ನಡೆದಿರುವ ತೆರಿಗೆ ವಂಚನೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ 5 ಕೋಟಿ ರೂ. ತನಕ ಬಹುಮಾನ ಪಡೆಯಲು ಅವಕಾಶವಿದೆ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.


ಹಾಗೇ ಕಾಳಧನಿಕರ ಬಗ್ಗೆ ಮಾಹಿತಿ ನೀಡಿದರೆ ಹೆದರುವ ಅಗತ್ಯವಿಲ್ಲ, ಕಾಳಧನಿಕರ ಬಗ್ಗೆ ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಹೀಗಾಗಿ, ಕಾಳಧನದ ಮಾಹಿತಿ ನೀಡಿ ನಿಶ್ಚಿಂತೆಯಿಂದ ಜನರು ಬಹುಮಾನ ಗೆಲ್ಲಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.


ಕಾಳಧನಿಕರ ಮಾಹಿತಿ ನೀಡಲು ದೊಡ್ಡ ಮೊತ್ತದ ಬಹುಮಾನವನ್ನು ಘೋಷಣೆ ಮಾಡಿದರೆ ಹೆಚ್ಚಿನ ವಂಚಕರ ಕುರಿತು ಮಾಹಿತಿ ಲಭ್ಯವಾಗುವ ಸಾಧ್ಯತೆ ಇರುತ್ತದೆ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ರೀತಿ ಮಾಡಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರಿಗೊಂದು ಭರ್ಜರಿ ಆಫರ್ ನೀಡಿದ ಪೇಟಿಎಂ