ವಾಜಪೇಯಿಗೋಸ್ಕರ ಹೊಸ ಕ್ರೀಡಾಂಗಣ ನಿರ್ಮಾಣ ಮಾಡಬೇಕಿತ್ತು: ಯುಪಿ ಸರ್ಕಾರಕ್ಕೆ ಅಖಿಲೇಶ್ ಯಾದವ್ ಟಾಂಗ್

ಗುರುವಾರ, 8 ನವೆಂಬರ್ 2018 (08:09 IST)
ಲಕ್ನೋ: ಇಲ್ಲಿನ ಎಕಾನ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹೆಸರಿನಿಂದ ಮರುನಾಮಕರಣ ಮಾಡಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟಾಂಗ್ ಕೊಟ್ಟಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದ ವೇಳೆ ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ತಮ್ಮ ಹಿರಿಯ ಮುತ್ಸುದ್ದಿ ನಾಯಕನ ಹೆಸರಿನಿಂದ ಕ್ರೀಡಾಂಗಣವನ್ನು ಮರು ನಾಮಕರಣ ಮಾಡಿತ್ತು.

ಈ ಕ್ರೀಡಾಂಗಣವನ್ನು ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗ ನಿರ್ಮಾಣ ಮಾಡಲಾಗಿತ್ತು. ವಾಜಪೇಯಿಗೆ ಗೌರವ ಸಲ್ಲಿಸಲೇಬೇಕಿದ್ದರೆ ಬೇರೆಯದೇ ಕ್ರೀಡಾಂಗಣ ನಿರ್ಮಿಸಬೇಕಿತ್ತು. ಅದರ ಬದಲು ಹಳೇ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಿದ್ದೇಕೆ ಎಂದು ಅಖಿಲೇಶ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುಪ್ರೀಂಕೋರ್ಟ್ ನಿಗದಿತ ಸಮಯ ಉಲ್ಲಂಘಿಸಿ ಪಟಾಕಿ ಹೊಡೆದಿದ್ದಕ್ಕೆ 700 ಮಂದಿ ವಿರುದ್ಧ ಪ್ರಕರಣ