Select Your Language

Notifications

webdunia
webdunia
webdunia
webdunia

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

Air India Crash

Krishnaveni K

ಅಹಮದಾಬಾದ್ , ಸೋಮವಾರ, 16 ಜೂನ್ 2025 (09:55 IST)
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ವಿಮಾನ ದುರಂತವಾದ ಸ್ಥಳ ಈಗ ಜನರಿಗೆ ವಿಸಿಟಿಂಗ್ ಜಾಗವಾಗಿದ್ದು, ಇದರಿಂದ ತನಿಖಾಧಿಕಾರಿಗಳಿಗೆ ಹೊಸ ತಲೆನೋವು ಶುರುವಾಗಿದೆ.

ಜೂನ್ 12 ರಂದು ಅಹಮದಾಬಾದ್ ನಲ್ಲಿ ವಿಮಾನ ಪತನವಾದ ಬಿಜೆ ಮೆಡಿಕಲ್ ಕಾಲೇಜು ಆಸ್ಪತ್ರೆ ಸುತ್ತಮುತ್ತಲ ಪ್ರದೇಶಕ್ಕೆ ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಈಗ ಜನರು ಬರುತ್ತಿದ್ದಾರೆ. ಕುತೂಹಲದಿಂದ ಸ್ಥಳ ವೀಕ್ಷಣೆಗೆಂದೇ ನೂರಾರು ಜನರು ಬರುತ್ತಿದ್ದಾರೆ.

ಇದರಿಂದ ತನಿಖಾಧಿಕಾರಿಗಳಿಗೆ ತಲೆನೋವಾಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಸ್ಥಳ ವೀಕ್ಷಣೆಗೆಂದು ಬರುತ್ತಿದ್ದಾರೆ. ಇದರಿಂದ ತನಿಖಾಧಿಕಾರಿಗಳಿಗೆ ತಮ್ಮ ಕೆಲಸ ಸುಗಮವಾಗಿ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಜನರು ಅಲ್ಲಿನ ಸಾಕ್ಷ್ಯಗಳಿಗೆ ಹಾನಿ ಮಾಡುತ್ತಾರೆ ಎಂಬುದೇ ಅಧಿಕಾರಿಗಳ ಆತಂಕವಾಗಿದೆ.

ಹೀಗಾಗಿ ಜನರು ಬಾರದಂತೆ ತನಿಖಾಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಈಗಲೂ ಸ್ಥಳದಲ್ಲಿ ಬೀಡುಬಿಟ್ಟಿರುವ ಅಧಿಕಾರಿಗಳು ಅವಶೇಷಗಳಡಿಯಲ್ಲಿ ಹುಡುಕಾಟ ನಡೆಸುತ್ತಲೇ ಇದ್ದಾರೆ. ಇದರ ನಡುವೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಅವರನ್ನು ನಿಯಂತ್ರಿಸುವುದೇ ಕೆಲಸವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು