Select Your Language

Notifications

webdunia
webdunia
webdunia
webdunia

ಏರ್ ಇಂಡಿಯಾ ವಿಮಾನದ ಬಾಲದಲ್ಲಿತ್ತು ಇನ್ನೊಂದು ಮೃತದೇಹ

Air India Crash

Krishnaveni K

ಅಹಮದಾಬಾದ್ , ಶನಿವಾರ, 14 ಜೂನ್ 2025 (15:10 IST)
Photo Credit: X
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಅವಶೇಷಗಳೆಡೆಯಲ್ಲಿ ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ. ಇದೀಗ ವಿಮಾನ ಬಾಲದಲ್ಲಿದ್ದ ಒಂದು ಮೃತದೇಹವನ್ನು ಹೊರತೆಗೆಯಲಾಗಿದೆ.

ಪತನಗೊಂಡ ವಿಮಾನದಲ್ಲಿ 242 ಪ್ರಯಾಣಿಕರದ್ದರು. ಅವರಲ್ಲಿ ಒಬ್ಬಾತ ಮಾತ್ರ ಸುರಕ್ಷಿತವಾಗಿ ಹೊರಗೆ ಬಂದಿದ್ದ. ಇನ್ನೆಲ್ಲರೂ ಸಾವನ್ನಪ್ಪಿದ್ದರು. ಜೊತೆಗೆ ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿದ್ದರಿಂದ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳೂ ಕೆಲವರು ಸಾವಿಗೀಡಾಗಿದ್ದರು.

ಈಗಲೂ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ವಿಮಾನದ ಹಿಂಭಾಗ ಹಾಸ್ಟೆಲ್ ಕಟ್ಟಡಕ್ಕೆ ನುಗ್ಗಿಕೊಂಡಿತ್ತು. ಇದೀಗ ಆ ಭಾಗವನ್ನು ತೆಗೆಯುವಾಗ ಅದರೊಳಗೂ ಒಂದು ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅವಶೇಷಗಳೆಡೆಯಿಂದ ಮೃತದೇಹಗಳನ್ನು ಹೊರತೆಗೆಯುವುದೇ ರಕ್ಷಣಾ ಸಿಬ್ಬಂದಿಗಳಿಗೆ ಸವಾಲಾಗಿತ್ತು. ಮನುಷ್ಯ ದೇಹವೆಂದು ಗುರುತಿಸಲೂ ಆಗದಷ್ಟು ಸುಟ್ಟು ಕರಕಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

Suhas Shetty Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಇಲ್ಲಿದೆ ಅಪ್ಡೇಟ್‌