Publish Date: Thu, 12 Jun 2025 (15:52 IST)
Updated Date: Thu, 12 Jun 2025 (15:55 IST)
ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ಏರ್ ಪೋರ್ಟ್ ಬಳಿ ಇಂದು ಮಧ್ಯಾಹ್ನ 1.10 ಕ್ಕೆ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮನ ಪತನವಾಗಿದ್ದು, ಪತನ ಹೇಗಾಯ್ತು ಎಂಬ ಕೊನೆಯ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.
ಏರ್ ಪೋರ್ಟ್ ನಿಂದ ಟೇಕಾಫ್ ಆದ ಐದೇ ನಿಮಿಷದಲ್ಲಿ ನಿಯಂತ್ರಣ ಕಳೆದುಕೊಂಡ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಮೊದಲು ಮರಕ್ಕೆ ಢಿಕ್ಕಿ ಹೊಡೆದಿದ್ದು ಬಳಿಕ ಎದುರಿದ್ದ ಕಟ್ಟಡದೊಳಗೆ ಕ್ರ್ಯಾಶ್ ಆಗಿದೆ. ವಿಮಾನ ಪತನಗೊಂಡ ಬೆನ್ನಲ್ಲೇ ಭಾರೀ ಸ್ಪೋಟ ಮತ್ತು ಬೆಂಕಿ ಕಾಣಿಸಿಕೊಂಡಿದೆ.
ಅಪಘಾತದ ರಭಸಕ್ಕೆ ವಿಮಾನ ಪೀಸ್ ಪೀಸ್ ಆಗಿದೆ. ಜೊತೆಗೆ ಪ್ರಯಾಣಿಕರಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಹಲವು ಜನ ಸಾವನ್ನಪ್ಪಿರುವ ಸಾಧ್ಯತೆಯಿದ್ದು, ಪರಿಹಾರ ಕಾರ್ಯ ಭರದಿಂದ ನಡೆಯುತ್ತಿದೆ.
ಜನವಸತಿ ಪ್ರದೇಶದಲ್ಲಿ ವಿಮಾನಪತನಗೊಂಡಿರುವ ಕಾರಣ ಸಾಕಷ್ಟು ಜನ ಸಾವನ್ನಪ್ಪಿರುವ ಸಾಧ್ಯತೆಯಿದೆ. 10 ಮಕ್ಕಳೂ ವಿಮಾನದಲ್ಲಿದ್ದರು ಎನ್ನಲಾಗಿದೆ. ಇದೀಗ ಮೊದಲು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆಯುತ್ತಿದೆ.