ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ಏರ್ ಪೋರ್ಟ್ ಬಳಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು ವಿಮಾನದಲ್ಲಿ 242 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ವಿಮಾನ ಟೇಕ್ ಆಫ್ ಆದ ಐದೇ ನಿಮಿಷದಲ್ಲಿ ವಿಮಾನ ಪತನಗೊಂಡಿದೆ. ಸಾಕಷ್ಟು ಮಂದಿ ಸಾವನ್ನಪ್ಪಿರುವ ಸಾಧ್ಯತೆಯಿದೆ. ಈಗಾಗಲೇ ಕೆಲವು ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆಯಲಾಗಿದೆ.
52 ಬ್ರಿಟಿಷ್ ಪ್ರಜೆಗಳು, 6 ಪೋರ್ಚುಗಲ್ ಪ್ರಜೆಗಳೂ ವಿಮಾನದಲ್ಲಿದ್ದಾರೆ. ಭಾರತೀಯರು 169 ಪ್ರಯಾಣಿಕರಿದ್ದರು. ಜನ ವಸತಿ ಪ್ರದೇಶದ ಮೇಲೆಯೇ ವಿಮಾನ ಪತನಗೊಂಡಿದೆ. ಮೊದಲು ಮರಕ್ಕೆ ಢಿಕ್ಕಿ ಹೊಡೆದು ಬಳಿಕ ಮರದ ಬಳಿಯಿದ್ದ ಕಟ್ಟಡದ ಮೇಲೆ ಕ್ರ್ಯಾಶ್ ಆಗಿದೆ.