ಬೆಂಗಳೂರು: ಮದುವೆ ಅಂದರೆ ಅಲ್ಲಿ ತಮಾಷೆ, ನಗು ಸಾಮಾನ್ಯ. ಆದರೆ ತಮಾಷೆ ಅತಿರೇಕಕ್ಕೆ ಹೋದರೆ ಕೆಲವೊಮ್ಮೆ ಅನಾಹುತವಾಗುತ್ತದೆ. ಇಲ್ಲಿಯೂ ಅದೇ ಆಗಿದ್ದು. ಗೆಜ್ಜೆ ಕಟ್ಟಿಸಲು ವಧು ಆಟ ಆಡಿಸಿದ್ದಕ್ಕೆ ವರ ಕೊನೆಗೆ ಮಾಡಿದ್ದು ನೋಡಿದರೆ ಸ್ವಲ್ಪ ನಗು, ಸ್ವಲ್ಪ ಬೇಸರವೂ ಆಗುತ್ತದೆ.
ಮದುವೆ ಮಂಟಪದಲ್ಲಿ ವರ ಮತ್ತು ವಧುವನ್ನು ಕೂರಿಸಲಾಗಿತ್ತು. ವರ ಏನೋ ಖುಷಿಯಲ್ಲಿ ತನ್ನ ಪತ್ನಿಗೆ ಉಡುಗೊರೆ ಕೊಡಲು ಮುಂದಾಗಿದ್ದ. ಅದಕ್ಕಾಗಿ ಬೆಳ್ಳಿ ಗೆಜ್ಜೆಯನ್ನು ಕೈಯಲ್ಲಿ ಹಿಡಿದು ಮಂಡಿಯೂರಿ ಕೂತಿದ್ದ.
ತನ್ನ ಆಸನದಲ್ಲಿ ಕೂತಿದ್ದ ವಧುವಿಗೆ ತನ್ನ ತೊಡೆ ಮೇಲೆ ಕಾಲಿಡಲು ವರ ಹೇಳಿದ್ದ. ಅದರಂತೆ ವಧು ಮೊದಲು ವರನ ತೊಡೆ ಮೇಲೆ ಕಾಲಿಟ್ಟು ಇನ್ನೇನು ಆತ ಗೆಜ್ಜೆ ಕಟ್ಟುತ್ತಾನೆ ಎನ್ನುವಾಗ ಆಟ ಆಡಿಸುವ ಸಲುವಾಗಿ ಕಾಲುಗಳನ್ನು ಹಿಂದೆ ಸರಿಸುತ್ತಾಳೆ.
ಇದೇ ರೀತಿ ವರನನ್ನು ಹಲವು ಬಾರಿ ಆಟ ಆಡಿಸುತ್ತಾಳೆ. ವರ ಆರಂಭದಲ್ಲಿ ಇದನ್ನು ನಗು ನಗುತ್ತಲೇ ಸ್ವೀಕರಿಸುತ್ತಾನೆ. ಆದರೆ ಕೊನೆಗೆ ಆತನ ಸಿಟ್ಟು ನೆತ್ತಿಗೇರುತ್ತದೆ. ವಧುವಿನ ಕಾಲನ್ನೇ ಹಿಡಿದೆಳೆದು ಸೀಟ್ ನಿಂದ ನೆಲಕ್ಕೆ ಕುಕ್ಕುತ್ತಾನೆ. ಅಷ್ಟೇ ಅಲ್ಲದೆ, ಆಕೆಗೆ ಮನಸೋ ಇಚ್ಛೆ ಥಳಿಸುತ್ತಾನೆ. ಈ ವಿಡಿಯೋ ಈಗ ವೈರಲ್ ಆಗಿದೆ.