Select Your Language

Notifications

webdunia
webdunia
webdunia
webdunia

Air India Plane crash: ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಮಾನ ದುರಂತಗಳು ಯಾವುವು ಗೊತ್ತಾ

Air India Crash

Krishnaveni K

ನವದೆಹಲಿ , ಶುಕ್ರವಾರ, 13 ಜೂನ್ 2025 (08:45 IST)
ನವದೆಹಲಿ: ಅಹಮ್ಮದಾಬಾದ್ ನಲ್ಲಿ ನಿನ್ನೆ ನಡೆದ ಏರ್ ಇಂಡಿಯಾ ವಿಮಾನ ದುರಂತ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. 242 ಪ್ರಯಾಣಿಕರಿದ್ದ ವಿಮಾನ ಪತನವಾಗಿ 260 ಪ್ಲಸ್ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಘಟನೆ ಭಾರತದ ಇತಿಹಾಸದಲ್ಲೇ ಒಂದು ಕರಾಳ ದಿನವಾಗಲಿದೆ. ಯಾಕೆಂದರೆ ಭಾರತೀಯ ವಿಮಾನ ದುರಂತಗಳ ಇತಿಹಾಸವನ್ನು ನೋಡಿದರೆ ಇದು ಎರಡನೇ ಅತ್ಯಂತ ದೊಡ್ಡ ದುರಂತ ಎನ್ನಬಹುದು. ಇದಕ್ಕೆ ಮೊದಲು 1966 ರಲ್ಲಿ ಕಝಕಿಸ್ತಾನ ಮತ್ತು ಸೌದಿ ಏರ್ ಲೈನ್ಸ್ ನಡುವೆ ಢಿಕ್ಕಿಯಾಗಿ 349 ಜನ ಸಾವನ್ನಪ್ಪಿದ್ದರು. ಅದೇ ಭಾರತದ ಅತೀ ದೊಡ್ಡ ವಿಮಾನ ದುರಂತವಾಗಿತ್ತು.

ಆಗಲೂ ವಿಮಾನ ಟೇಕ್ ಆಫ್ ಅದ ಕೆಲವೇ ನಿಮಿಷಕ್ಕೆ ಎರಡೂ ವಿಮಾನಗಳ ನಡುವೆ ಢಿಕ್ಕಿಯಾಗಿತ್ತು. ಈಗ ಅಹಮ್ಮದಾಬಾದ್ ನಲ್ಲಿ ನಡೆದಿರುವುದು ಅತ್ಯಂತ ದೊಡ್ಡ ದುರಂತ.

1978 ಅರಬ್ಬಿ ಸಮುದ್ರಕ್ಕೆ ಬಿದ್ದ ಏರ್ ಇಂಡಿಯಾ
1978 ರಲ್ಲಿ ಮುಂಬೈನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅರಬ್ಬೀ ಸಮುದ್ರಕ್ಕೆ ಬಿದ್ದು 213 ಜನ ಸಾವನ್ನಪ್ಪಿದ್ದರು.

2010 ಮಂಗಳೂರು ವಿಮಾನ ದುರಂತ
2010 ರಲ್ಲಿ ಮಂಗಳೂರಿನಲ್ಲಿ ನಡೆದ ವಿಮಾನ ದುರಂತವನ್ನು ಕರ್ನಾಟಕ ಎಂದಿಗೂ ಮರೆಯದು. ದುಬೈನಿಂದ ಮಂಗಳೂರಿಗೆ ಬಂದು ಇನ್ನೇನು ಲ್ಯಾಂಡ್ ಆಗುವ ಹೊತ್ತಿಗೆ ವಿಮಾನ ಕ್ರ್ಯಾಶ್ ಆಗಿತ್ತು. ಘಟನೆಯಲ್ಲಿ 158 ಮಂದಿ ಸಾವನ್ನಪ್ಪಿದ್ದರು.

1996 ರಲ್ಲಿ ವಿಮಾನಗಳ ಢಿಕ್ಕಿ
1996 ರಲ್ಲಿ ಸೌದಿ ಏರ್ ಲೈನ್ಸ್ ಫ್ಲೈಟ್ ದೆಹಲಿಯಿಂದ ಹೊರಟು ಭಾರತದ ವಾಯುಪ್ರದೇಶದಿಂದ ಇನ್ನೇನು ಹೊರಹೋಗಬೇಕು ಎನ್ನುವಾಗ ಅದೇ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದ ಕಝಕಿಸ್ತಾನದ ಏರ್ ಲೈನ್ಸ್ ಢಿಕ್ಕಿ ಹೊಡೆದು 349 ಮಂದಿ ಸಾವನ್ನಪ್ಪಿದ್ದರು.

1993 ರಲ್ಲಿ ಇಂಡಿಯನ್ ಏರ್ ಲೈನ್ಸ್ ಕ್ರ್ಯಾಶ್
ಔರಂಗದಾಬಾದ್ ನಿಂದ ಮುಂಬೈಗೆ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ಟೇಕ್ ಆಫ್ ಆಗಬೇಕೆನ್ನುವಷ್ಟರಲ್ಲಿ ರನ್ ವೇನಲ್ಲಿದ್ದ ಟ್ರಕ್ ಗೆ ಢಿಕ್ಕಿ ಹೊಡೆದು 55 ಜನ ಸಾವನ್ನಪ್ಪಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್