Publish Date: Thu, 12 Jun 2025 (17:12 IST)
Updated Date: Thu, 12 Jun 2025 (17:14 IST)
ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ನಡೆದ ಭೀಕರ ಏರ್ ಇಂಡಿಯಾ ವಿಮಾನ ದುರಂತಕ್ಕೆ ಕೆಲವೇ ಸೆಕೆಂಡುಗಳ ಮೊದಲು ಅಪಾಯ ಅರಿತ ಪೈಲಟ್ ಎಟಿಸಿ ಕೇಂದ್ರಕ್ಕೆ ಕರೆ ಮಾಡಿದ್ದರು. ಅವರು ಹೇಳಿದ್ದೇನು?
ಮಧ್ಯಾಹ್ನ 1.30 ರ ಸುಮಾರಿಗೆ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನವಾಗಿದೆ. ವಿಮಾನ ಟೇಕ್ ಆಫ್ ಆದಾಗಲೇ ಎಲ್ಲವೂ ಸರಿಯಿಲ್ಲ ಎನ್ನುವುದು ಹೊರಗಿನಿಂದ ನೋಡುತ್ತಿದ್ದ ಸಾರ್ವಜನಿಕರಿಗೇ ಅನಿಸಿತ್ತು. ಅದೇ ಕಾರಣಕ್ಕೆ ವ್ಯಕ್ತಿಯೊಬ್ಬರು ವಿಮಾನದ ವಿಡಿಯೋ ಮಾಡಿಕೊಂಡಿದ್ದರು.
ಇನ್ನು, ವಿಮಾನ ದುರಂತಕ್ಕೀಡಾಗುತ್ತದೆ ಎಂದು ಪೈಲೆಟ್ ಗೆ ಅರಿವಾದ ತಕ್ಷಣ ಅವರು ಕ್ರ್ಯಾಶ್ ಲ್ಯಾಂಡಿಂಗ ಮಾಡಬೇಕಷ್ಟೇ ಎಂದು ಎಟಿಸಿ ಕೇಂದ್ರಕ್ಕೆ ಕರೆ ಮಾಡಿದ್ದರು. ಕರೆ ಮಾಡಿದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಭೂಮಿಗೆ ಅಪ್ಪಳಿಸಿದೆ.
ಕೊನೆಯ ಕರೆಗೆ ಮೇ ಡೇ ಕರೆ ಎನ್ನುತ್ತಾರೆ. ಪೈಲೆಟ್ ಗೆ ಅಪಾಯದ ಅರಿವಾಗಿದ್ದರಿಂದ ಅವರು ಇದನ್ನು ಕಂಟ್ರೋಲ್ ಮಾಡಲಾಗುತ್ತಿಲ್ಲ. ಕ್ರ್ಯಾಶ್ ಲ್ಯಾಂಡಿಂಗ್ ಒಂದೇ ನನ್ನ ಮುಂದಿರುವ ದಾರಿ ಎಂದು ಕರೆ ಮಾಡಿದ್ದರು. ಅದಾದ ಸೆಕೆಂಡುಗಳಲ್ಲೇ ವಿಮಾನ ಅಪ್ಪಳಿಸಿದೆ.