Select Your Language

Notifications

webdunia
webdunia
webdunia
webdunia

ಕರೂರು ಕಾಲ್ತುಳಿತದ ಬಳಿಕ ಬಿಗಿ ಭದ್ರತೆಯಲ್ಲಿ ಚುನಾವಣಾ ರ‍್ಯಾಲಿ ಶುರು ಮಾಡಿದ ನಟ ವಿಜಯ್‌

Tamil Nadu Assembly Election, Tamil Vetri Kalagam, actor Vijay

Sampriya

ಚೆನ್ನೈ , ಭಾನುವಾರ, 23 ನವೆಂಬರ್ 2025 (12:40 IST)
Photo Credit X
ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭರ್ಜರಿ ತಾಲೀಮು ನಡೆಯುತ್ತಿದೆ. ಆಡಳಿತರೂಢ ಡಿಎಂಕೆ ಪಕ್ಷಕ್ಕೆ ಸೆಡ್ಡು ಹೊಡೆಯಲು ನಟ ವಿಜಯ್‌ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಭರ್ಜರಿ ಕಸರತ್ತು ನಡೆಸುತ್ತಿದೆ. 

ಟಿವಿಕೆ ಮುಖ್ಯಸ್ಥ, ನಟ ವಿಜಯ್‌ ಅವರು ಇಂದು ಕಾಂಚೀಪುರಂ ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ತಮ್ಮ ಚುನಾವಣಾ ರ‍್ಯಾಲಿಯನ್ನು ಪುನರಾರಂಭಿಸಲಿದ್ದಾರೆ. ‌‌ಕರೂರಿನಲ್ಲಿ ಸೆ.27ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಜನ ಮೃತಪಟ್ಟಿದ್ದರು.

ಎರಡು ತಿಂಗಳ ಹಿಂದೆ ನಡೆದ ಕರೂರು ಕಾಲ್ತುಳಿತದ ಬಳಿಕ ಸ್ಥಗಿತಗೊಂಡಿದ್ದ ಚುನಾವಣಾ ಪ್ರಚಾರ ಮತ್ತೆ ಆರಂಭವಾಗಲಿದೆ. ಕಾರ್ಯಕ್ರಮ ಸುಗಮವಾಗಿ ನಡೆಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಕಾಂಚೀಪುರಂ ಜಿಲ್ಲೆಯ ಸುಂಗುವರ್ಚಟ್ಟಿರಂನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು 1,500 ಜನರಿಗೆ ಕ್ಯೂಆರ್-ಆಧಾರಿತ ಪಾಸ್‌ಗಳನ್ನು ನೀಡಲಾಗಿದೆ. ಪಾಸ್‌ ಹೊಂದಿದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು