Publish Date: Wed, 08 Jan 2020 (06:44 IST)
Updated Date: Wed, 08 Jan 2020 (06:46 IST)
ನವದೆಹಲಿ : ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್ ಯುಗೆ ಭೇಟಿ ನೀಡಿದ್ದಾರೆ.
ತಮ್ಮ ಅಭಿನಯದ ಛಪಾಕ್ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳ ಒಗ್ಗಟ್ಟಿನ ಸಂಕೇತವಾದ ಕಪ್ಪು ಬಣ್ಣದ ವಸ್ತ್ರಧರಿಸಿ ನಿನ್ನೆ ಸಂಜೆ ಸುಮಾರು 7.45ಕ್ಕೆ ಜೆಎನ್ ಯು ಗೆ ಭೇಟಿ ನೀಡಿದ್ದಾರೆ.
ತಮ್ಮನ್ನು ವಿಚಾರಿಸಲು ಬಂದ ಬಾಲಿವುಡ್ ನಟಿಗೆ ವಿದ್ಯಾರ್ಥಿಗಳು ಅಜಾದಿ ಎಂದು ಕರೆಯುವುದರ ಮೂಲಕ ಬರಮಾಡಿಕೊಂಡಿದ್ದಾರೆ. 10 ನಿಮಿಷಗಳ ಕಾಲ ವಿದ್ಯಾರ್ಥಿಗಳ ಜೊತೆಗಿದ್ದ ದೀಪಿಕಾ ಬಳಿಕ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಇದೀಗ ಜೆಎನ್ ಯು ಗೆ ನಟಿ ದೀಪಿಕಾ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.